ಪ್ರಮುಖ ಸುದ್ದಿ
ಬಿಬಿಎಂಪಿ ಮೇಯರ್ ಗಂಗಾಂಬಿಕೆಗೆ ಬಿತ್ತು 500ರೂಪಾಯಿ ದಂಡ!
ಬೆಂಗಳೂರು : ಬೆಂಗಳೂರು ಮೇಯರ್ ಗಂಗಾಂಬಿಕೆ ಅವರು ಜುಲೈ 30ರಂದು ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶುಭಾಶಯ ಕೋರಿದ್ದರು. ಆದ್ರೆ, ಶುಭಾಶಯ ವೇಳೆ ಸಿಎಂಗೆ ನೀಡಿದ ಡ್ರೈಫ್ರೂಟ್ಸ್ ಬುಟ್ಟಿಯ ಮೇಲ್ಪದರ ಪ್ಲಾಸ್ಟಿಕ್ ಯುಕ್ತವಾಗಿತ್ತು. ಖುದ್ದು ಮೇಯರ್ ಪ್ಲಾಸ್ಟಿಕ್ ಬಳಕೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ದಂಡ ವಿಧಿಸುತ್ತಾರೆ. ಮೇಯರ್ ಮಾಡಿದ್ದೇನು ಎಂದು ಪ್ರಶ್ನೆಗಳ ಸುರಿಮಳೆ ಸುರಿಸಲಾಗಿತ್ತು.
ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಪಣತೊಟ್ಟಿರುವ ಬಿಬಿಎಂಪಿ ಮೇಯರ್ ಅವರೇ ನಿಯಮ ಉಲ್ಲಂಘಿಸಿದ್ದು ಟೀಕೆಗೆ ಗುರಿಯಾದ ವಿಚಾರ ಗಮನಿಸಿದ ಗಂಗಾಂಬಿಕೆ ಪ್ಲಾಸ್ಟಿಕ್ ಬಳಸಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಖುದ್ದಾಗಿ ಬಿಬಿಎಂಪಿ ಆರೋಗ್ಯ ಇಲಾಖೆಗೆ ಐನೂರು ರೂಪಾಯಿ ದಂಡ ಕಟ್ಟುವುದಾಗಿ ತಿಳಿಸಿದ್ದಾರೆ.