
ಶಿಕ್ಷಕರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ
ಶಿಕ್ಷಕರು ದೇಶದ ನಿರ್ಮಾತೃಗಳು- ಗದ್ದುಗೆ
yadgiri, ಶಹಾಪುರಃ ಮುಗ್ಧ ಮಕ್ಕಳಿಗೆ ವಿದ್ಯೆ ಜೊತೆಗೆ ನೀತಿ ಬೋಧನೆ ಮೂಲಕ ಉತ್ತಮ ಸಂಸ್ಕಾರ ನೀಡುವ ಶಿಕ್ಷಕರು ತನ್ಮೂಲಕ ದೇಶದ ನಿರ್ಮಾತೃಗಳಾಗಿದ್ದಾರೆ ಎಂದು ಕರವೇ ಉಕ ಅಧ್ಯಕ್ಷ ಡಾ.ಶರಣು ಬಿ.ಗದ್ದುಗೆ ತಿಳಿಸಿದರು
ನಗರದ ಚರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸ್ನೇಹಜೀವಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ಕನ್ನಡ ಮತ್ತ ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಒಂದು ಕಲ್ಲನ್ನು ಮೂರ್ತರೂಪವಾಗಿ ತರುವಲ್ಲಿ ಶ್ರಮವಹಿಸುತ್ತಾರೆ. ಅವರ ಸೇವೆಗೆ ಬೆಲೆ ಕಟ್ಟಲಾಗದು. ಓರ್ವ ಶಿಕ್ಷಕ ಹುದ್ದೇಗೇರಲು ಮತ್ತೊರ್ವ ಶಿಕ್ಷಕರೇ ಕಾರಣೀಭೂತರಾಗಿರುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಶಿಕ್ಷಕರ ಆಶೀರ್ವಾದ, ವಿದ್ಯಾಧಾನದಿಂದಲೇ ಅವರು ಬೆಳೆದಿರುತ್ತಾರೆ. ಎಲ್ಲದಕ್ಕೂ ಶಿಕ್ಷಕರೇ ತಾಯಿ ಬೇರು. ಹೀಗಾಗಿ ಎಷ್ಟೇ ಎತ್ತರಕ್ಕೂ ಬೆಳೆದರೂ ಮೂಲ ವಿದ್ಯೇ ಬೇರಾದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಶಿಕ್ಷಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಸಾಧಕರನ್ನು ಗುರುತಿಸಿ ಗೌರವಾದಾರ ನೀಡುತ್ತಿರುವ ಸ್ನೇಹ ಜೀವಿ ಟ್ರಸ್ಟ್ ಕಾರ್ಯ ಶ್ಲಾಘನೀಯವಾದದು ಎಂದರು.
ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಪ್ರಾಂಶುಪಾಲ ಶಿವಲಿಂಗಣ್ಣ ಸಾಹು ಶಿಕ್ಷಕ ಲಕ್ಷ್ಮಣ ಲಾಳಸಗೇರಿ ಮಾತನಾಡಿ, ಪ್ರಸಕ್ತ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಕಾಲಘಟ್ಟದಲ್ಲಿ ಟ್ರಸ್ಟ್ ದಾರ್ಶಿನಿಯಕ ತತ್ವಗಳು ಉಣಬಡಿಸುತ್ತಿರುವ ಕಾರ್ಯ ಮತ್ತು ಕ್ರಿಯಾಶೀಲತೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ಅಗತ್ಯತೆಗುಣವಾಗಿ ಆಯೋಜಿಸಿರುವದು ಸಾರ್ಥಕೆ ಪಡೆದಿದೆ ಎಂದರು.
ಈ ಸಂದರ್ಭದಲ್ಲಿ ಸಾಧಕರಾದ ಸಯ್ಯದ್ ಚಾಂದಪಾಶಾ, ನಂದಿಹಳ್ಳಿ(ಜೆ) ಬಂಡೆಗುರು ಸ್ವಾಮೀಜಿ, ಡಾ.ಬಸವರಾಜ ಇಜೇರಿ, ಚಂದ್ರಶೇಖರ ಗೋಗಿ, ಮಹೇಶ ಪತ್ತಾರ, ವಿಶ್ವನಾಥ ಕುಂಬಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೃಷ್ಟಿ ಸಂಗಡಿಗರಿಂದ ಭರತನಾಟ್ಯ ಪ್ರದರ್ಶಿಸಲಾಯಿತು. ವಿವಿಧ ಸಾಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಬಸವಯ್ಯ ಶರಣರು ಸಾನ್ನಿಧ್ಯವಹಿಸಿದ್ದರು. ಶಿವರಾಜ ದೇಶಮುಖ, ರಾಘವೇಂದ್ರ ಹಾರಣಗೇರಾ, ಶರಣು ಪಾಟೀಲ್, ಟ್ರಸ್ಟ್ ಅಧ್ಯಕ್ಷೆ ಸಂಗೀತ ಹೂಗಾರ, ಕಾರ್ಯದರ್ಶಿ ಸುರೇಖಾ ಕುಂಬಾರ ಉಪಸ್ಥಿತರಿದ್ದರು.