ಶ್ರೀಕಿ ಬಂಧಿಸಿ ಪ್ರಕರಣ ದಾಖಲಿಸಿದ್ದು ನಾವು, ಆರೋಪಿ ಬಿಟ್ಟವರಿಂದ ಪಾಠ ಕಲಿಬೇಕಿಲ್ಲ – ಸಿಎಂ ಬೊಮ್ಮಾಯಿ
ಬಿಟ್ ಕಾಯಿನ್ ಬಯಲಿಗೆಳೆದದ್ದೆ ನಾವು
ಬೆಂಗಳೂರಃ ಬಿಟ್ ಕಾಯಿನ್ ಪ್ರಕರಣ ಇಂದಿನದಲ್ಲ, 2016 ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಆರೋಪಿ ಶ್ರೀಕಿಯನ್ನು ಬಂಧಿಸಿ ಕ್ರಮಕೊಳ್ಳದೆ ಬಿಟ್ಟಿರುವುದೇ ಇಂದು ನಾವು ಪ್ತಕರಣ ಪತ್ತೆ ಮಾಡಿ ಆರೋಪಿ ಶ್ರೀಕಿಯನ್ನು ಬಂಧಿಸಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಟ್ ಕಾಯಿನ್ ಪ್ರಕರಣ 2016 ರಲ್ಲಿ ಬೆಳಕಿಗೆ ಬಂದಿತ್ತು, ಆಗ ಸಿಎಂ ಸಿದ್ರಾಮಯ್ಯನವರು ಯಾವ ಕಾರಣಕ್ಕೆ ಪ್ರಕರಣ ದಾಖಲಿಸಿದೆ ಆರೋಪಿಯನ್ನು ಬಿಟ್ಟು ಕಳುಹಿಸಿದರು ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದರು.
ಬಿಟ್ ಕಾಯಿನ್ ಪ್ರಕರಣ ಬಯಲಿಗೆಳೆದವರೇ ನಾವು ಇದರಲ್ಲಿ ಯಾವುದೇ ಪ್ರಭಾವಿ ವ್ಯಕ್ತಿಗಳಿರಲಿ ಕ್ರಮಕೈಗೊಳ್ಳದೆ ಬಿಡಲ್ಲ. ಈ ಪ್ರಕರಣದಡಿ ಬರುವ ಯಾರೇ ಆಗಿರಲಿ ಬಲಿಯಾಕದೆ ಬಿಡಲ್ಲ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ. ಇಂದು ಕಾಂಗ್ರೆಸ್ ನಾಯಕ ಸುರ್ಜೆವಾಲ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಆರೋಪಿಯನ್ನು ಬಿಟ್ಟು ಕಳುಹಿಸಿದ್ದು ಯಾರೆಂದು ಅವರ ರಾಜ್ಯ ನಾಯಕರಿಗೆ ಕೇಳಲಿ ಅವರು, ಶ್ರೀಕಿಯನ್ನು ಬಿಟ್ಟಿದ್ದೆ ಕಾಂಗ್ರೆಸ್ ಸರ್ಕಾರ ಇಂದು ಇಷ್ಟು ದೊಡ್ಡಮಟ್ಟದಲ್ಲಿ ಬಿಟ್ ಕಾಯಿನ್ ದಂಧೆ ನಡೆಸಲು ಬಿಟ್ಟವರೇ ಅವರು. ಅಂದೇ ತನಿಖೆ ನಡೆಸಿ ಆರೋಪಿ ಶ್ರೀಕಿಯನ್ನು ಜೈಲಿಗಟ್ಟಬೇಕಿತ್ತು ಎಂದು ದೂರಿದರು.