ಪ್ರಮುಖ ಸುದ್ದಿ
ನಕಲಿ ವಿಡಿಯೋ ಪ್ರಸಾರ – ಕಾಂಗ್ರೆಸ್ ಹಿರಿಯ ನಾಯಕನ ವಿರುದ್ಧ FIR ದಾಖಲು
ನಕಲಿ ವಿಡಿಯೋ ಪ್ರಸಾರ ಮಾಡಿದ ಕಾಂಗ್ರೆಸ್ ಹಿರಿಯ ನಾಯಕನ ವಿರುದ್ಧ FIR ದಾಖಲು
ಭೋಪಾಲ್ಃ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವ್ಹಾಣ ಅವರಿಗೆ ಸಂಬಂಧಿಸಿದ ತಿರುಚಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಮತ್ತು ಇತರೆ ಹತ್ತು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ ಸಂಗತಿ ನಡೆದಿದೆ.
ತಿರುಚಿದ ವಿಡಿಯೋ ಪ್ರಸರಣ ಕುರಿತು ಬಿಜೆಪಿ ನಾಯಕರು ದೂರು ಸಲ್ಲಿಸಿದ್ದರು. ಕಮಲ್ ನಾಥ ಸರ್ಕಾರದ ನೀತಿಯನ್ನು ವಿರೋಧಿಸಿ ಚವ್ಹಾಣ ಹೇಳಿಕೆ ನೀಡಿದ್ದರು.
ಅದನ್ನೆ ತಿರುಚಿ ಎಲ್ಲಡೆ ಪ್ರಸಾರ ಮಾಡಲಾಗಿತ್ತು. ಆಗ ಚವ್ಹಾಣ ನೀಡಿದ ಹೇಳಿಕೆ ತಿರುಚಲಾಗಿದೆ ಎಂದು ಬಿಜೆಪಿ ಆಪಾದನೆ ಮಾಡಿತ್ತು. ಅಲ್ಲದೆ ತಿರುಚಿದ ವಿಡಿಯೋ ಶೇರ್ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಈಗ ತಿರುಚಿದ ವಿಡಿಯೋ ಶೇರ್ ಮಾಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿದೆ.