ಪ್ರಮುಖ ಸುದ್ದಿ

ಗ್ರಾಮೀಣ ಅಭೀವೃದ್ಧಿ ಯೋಜನೆಗಳ ಕುರಿತು ಮನನ ಮಾಡಿ- ಗುರು ಪಾಟೀಲ್ ಶಿರವಾಳ

ಕಾರ್ಯಕಾರಣಿ ಹಾಗೂ ಎಂಎಲ್ಸಿ ಚುನಾವಣೆ ಪೂರ್ವಭಾವಿ ಸಭೆ

yadgiri, ಶಹಾಪುರಃ ಪ್ರಧಾನಿ ನರೇಂದ್ರ ಮೋದಿಜಿಯವರ ದೇಶ ಅಭಿವೃದ್ಧಿ ಚಿಂತನೆಯಿಂದಾಗಿ ಅವರು ಪ್ರಧಾನಿ ಆದ ಮೇಲೆ ಭಾರತದ ಹಳ್ಳಿಹಳ್ಳಿಗಳು ಪ್ರಜ್ವಲಿಸಲು ಸಾಧ್ಯವಾಯಿತು. ವಿದ್ಯುತ್ ಸಂಪರ್ಕವಿಲ್ಲದ ದೇಶದ 40 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕಿಸುವ ಕೆಲಸ ಮಾಡಿದರು. ಅದರಂತೆ ಶಿಕ್ಷಣ, ನರೇಗಾ ಯೋಜನೆ ಸೇರಿದಂತೆ ಆದರ್ಶ ಗ್ರಾಮಗಳ ಯೋಜನೆಗಳು, ಗ್ರಾಮ ಸಡಕ್ ಯೋಜನೆ ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕಾರಣಿ ಹಾಗೂ ಎಂಎಲ್ಸಿ ಪೂರ್ವಭಾವಿ ಚುನಾವಣೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿ ಕಾರ್ಯಕರ್ತರು ಧೈರ್ಯವಾಗಿ ಎಂಲ್ಸಿ ಚುನಾವಣೆಯಲ್ಲಿ ಮತ ಕೇಳುವ ಅಧಿಕಾರವಿದೆ. ಪ್ರಧಾನಿ ಮೋದಿಜೀಯವರು ಇಡಿ ವಿಶ್ವಮಟ್ಟದಲ್ಲಿ ಭಾರತ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಪ್ರಸಕ್ತ ಘೋಷಣೆಯಾದ ಎಂಎಲ್ಸಿ ಚುಣಾವಣೆಗಳಲ್ಲಿ ಮತದಾರರಿಗೆ ಕಿಸಾನ್ ಸಮ್ಮಾನ್ ಯೋಜನೆ, ಪ್ರತಿ ರೈತರ ಖಾತೆಗೆ 6000 ರೂ. ಆರ್ಥಿಕ ನೆರವು ನೀಡುವದು ಸೇರಿದಂತೆ ರಾಜ್ಯದ ಸಿಎಂ ಬೊಮ್ಮಾಯಿ ಅವರು ಘೋಷಿಸಿದ ನೂತನ ಯೋಜನೆಯಾದ ರೈತರ ಮಕ್ಕಳಿಗೆ ಸ್ಕಾಲರಶಿಪ್ ನೀಡುವದು ಮತ್ತು ಕೃಷಿ ಚುಟುವಟಿಕೆಕೈಗೊಳ್ಳುವವರಿಗೆ ಬಡ್ಡಿ ರಹಿತ ಸಾಲ ವಿತರಣೆಗೆ ಮನ್ನಣೆ ನೀಡಿರುವದು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಈ ಕುರಿತು ಗ್ರಾಮೀಣ ಭಾಗದ ಜನರಿಗೆ ಮತ್ತು ಗ್ರಾಪಂ ಜನಪ್ರತಿನಿಧಿಗಳಿಗೆ ಮನನ ಮಾಸಬೇಕೆಂದು ಸೂಚಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ನಗರ ಅಧ್ಯಕ್ಷ ದೇವು ಕೋನೇರ, ಪ್ರಮುಖರಾದ ಡಾ.ಚಂದ್ರಶೇಖರ ಸುಬೇದಾರ, ಲಾಲನಸಾಬ ಖುರೇಶಿ, ಮಲ್ಲಿಕಾರ್ಜುನ ಗಂಧದಮಠ, ಅಶೋಕ ನಾಯಕ, ಮಲ್ಲಿಕಾರ್ಜುನ ಕಂದಕೂರ, ಅಮೃತ ಹೂಗಾರ, ರಾಜೂ ಪತ್ತಾರ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button