ಜಿಲ್ಲೆಗೊಂದು ಗೋಶಾಲೆಃ 15 ಕೋಟಿ ಬಿಡುಗಡೆ-ಬೊಮ್ಮಾಯಿ
ಜಿಲ್ಲೆಗೊಂದು ಗೋಶಾಲೆಃ 15 ಕೋಟಿ ಬಿಡುಗಡೆ-ಬೊಮ್ಮಾಯಿ
ಬೆಂಗಳೂರು: ಪ್ರತಿ ಜಿಲ್ಲೆಗೊಂದರಂತೆ ಗೋಶಾಲೆ ತೆರೆಯಲು ನಿಧರಿಸಲಾಗಿದ್ದು, ಗೋಶಾಲೆಗಾಗಿ ಮೊದಲ ಹಂತದಲ್ಲಿ 15 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಮಾಡಲಾಗುತ್ತಿದ್ದು, ಇದಕ್ಕಾಗಿ ಮೊಬೈಲ್ ಯಾಪ್ ಮೂಲಕ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಅಲ್ಲದೆ ರೈತರಿಗೆ ಸ್ವಯಂ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.”ಕರ್ನಾಟಕದಲ್ಲಿ 9 ಆಕ್ಷಿಜನ್ ಘಟಕ ಇದ್ದು, 815 ಉತ್ಪಾದನಾ ಸಾಮರ್ಥ್ಯ ಇದೆ. 5000 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯ ಇದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಖಾಸಗಿ ಬಂಡವಾಳದಾರರು ಬಂದರೆ ಸಬ್ಸಿಡಿ ನೀಡಲಾಗುವುದು. ಕನಿಷ್ಠ 10 ಕೋಟಿ ಬಂಡವಾಳ ಹೂಡಬೇಕು” ಎಂದಿದ್ದಾರೆ.
ಇನ್ನು ಕಾರಾಗೃಹ ಅಭಿವೃದ್ಧಿ ಮಂಡಳಿ ಅಧಿವೇಶನದಲ್ಲಿ ತರಲು ತೀರ್ಮಾನಿಸಲಾಗಿದ್ದು, 139 ಖೈದಿಗಳ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದ್ದು, ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.