ಪ್ರಮುಖ ಸುದ್ದಿ
BREAKING- ಸಿಎಂ BSY ಗೆ ಕೊರೊನಾ ಸೋಂಕು ಆಸ್ಪತ್ರೆಗೆ ದಾಖಲು.!
ಸಿಎಂ BSY ಗೆ ಕೊರೊನಾ ಸೋಂಕು ಆಸ್ಪತ್ರೆಗೆ ದಾಖಲು.!
ಬೆಂಗಳೂರಃ ಸಿ.ಎಂ.ಯಡಿಯೂರಪ್ಪ ನವರಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ಸ್ವತಃ ಅವರೇ ಟ್ವಿಟ್ ಮೂಲಕ ತಿಳಿಸಿದ್ದು, ತಮ್ಮ ಕೊರೊನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿರುವ ಹಿನ್ನೆಲೆ ಯಾವುದೇ ರೋಗ ಲಕ್ಷಣಗಳು ಕಾಣದಿದ್ದರೂ ಮುಂಜಾಗೃತಕ್ರಮವಾಗಿ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿರುವೆ ಎಂದು ಅವರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಅಲ್ಲದೆ ತಮ್ಮ ಸಂಪರ್ಕದಲ್ಲಿರುವ ಎಲ್ಲರೂ ಕೋವಿಡ್ ಟೆಸ್ಟ್ ಗೆ ಒಳಗಾಗಿ ಎಂದು ಅವರು ತಿಳಿಸಿದ್ದಾರೆ. ಈಚೆಗೆ ಸಿಎಂ ಕಚೇರಿಯಲ್ಲಿ 7 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಅವರು ಒಂದು ವಾರ ಹೋಂ ಕ್ವಾರಂಟೈನ್ ನಲ್ಲಿದ್ದರು.