ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ನಿರ್ಧರಿಸಿದ್ದೆ – BSY
ಯಡಿಯೂರಪ್ಪ ನವರ ರಾಜೀನಾಮೆ ಅಂಗೀಕಾರ
ಬೆಂಗಳೂರಃ ರಾಜ್ಯ ಭವನಕ್ಕೆ ತೆರಳಿದ್ದ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ರಾಜ್ಯಪಾಲರು ಯಡಿಯೂರಪ್ಪನವರು ನೀಡಿದ ರಾಜೀನಾಮೆ ಅಂಗೀಕಾರವಾಗಿದೆ.
ರಾಜೀನಾಮೆ ಸಲ್ಲಿಸಿ ಹೊರಬಂದ ಯಡಿಯೂರಪ್ಪ ಮಾಧ್ಯಮದ ಜೊತೆ ಮಾತನಾಡಿ, ನನ್ನ ಮೇಲೇ ಭರವಸೆ ಇಟ್ಟು 75 ವರ್ಷ ಮೀರಿದವರ ಪೈಕಿ ನಾನೊಬ್ಬನೇ ಸಿಎಂ ಆಗಿ ಮುಂದುವರೆಯಲು ಎರಡು ವರ್ಷ ಅವಕಾಶ ಕಲ್ಪಿಸಿದ್ದ ಪ್ರಧಾನಿ ಮೋದಿಜೀ, ಅಮಿತ್ ಶಾ, ನಡ್ಡಾ ಸೇರಿದಂತೆ ಪ್ರಮುಖರಿಗೆ ಅಭಿನಂದನೆ ಸಲ್ಲಿಸಿದರು.
ನಾನು ಎರಡು ತಿಂಗಳ ಹಿಂದೆಯೇ ರಾಜೀನಾಮೆ ಸಲ್ಲಿಕೆಗೆ ಮುಂದಾಗಿದ್ದೆ, ಎರಡು ವರ್ಷ ಅಧಿಕಾರ ಅವಧಿ ಮುಗಿಯಲಿ ಎಂಬ ಕಾರಣಕ್ಕೆ ಇಂದು ನಾನೇ ಸ್ವತಃ ರಾಜೀನಾಮೆ ನೀಡಿದ್ದು, ಇದಕ್ಕೆ ಯಾವುದೇ ಹೈಕಮಾಂಡ್ ಒತ್ತಡವಿಲ್ಲ. ಬೇರೆಯವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದೇನೆ.
ಮುಂದಿನ ಸಿಎಂ ಕುರಿತು ಯಾವುದೇ ಹೆಸರು ಹೇಳಲು ನಾನು ಇಚ್ಛಿಸುವದಿಲ್ಲ. ಹೈಕಮಾಂಡ್ ಆ ಕುರಿತು ನಿರ್ಧರಿಸಲಿದೆ. ಇಲ್ಲಿವರೆಗೂ ಬೆಂಬಲಿಸಿ ಎಲ್ಲಾ ರೀತಿಯ ಸ್ಥಾನಮಾನ ಪಡೆಯಲು ಸಹಕರಿಸಿದ ಅಪಾರ ಸಂಖ್ಯೆಯ ಕಾರ್ಯಕರ್ತರು, ನಾಡಿನ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.