ಪ್ರಮುಖ ಸುದ್ದಿ
ಬಲೆಗೆ ಬಿದ್ದ ‘ಬುಲೆಟ್ ಚೋರ’ : ಇನ್ನೂ ಐವರು ಖತರ್ನಾಕ್ ಕಳ್ಳರಿದ್ದಾರಂತೆ ಹುಷಾರ್!
ಕೋಲಾರ : ರಾಯಲ್ ಎನಿಫೀಲ್ಡ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ‘ಬುಲೆಟ್ ಚೋರ’ನನ್ನು
ಬಂಗಾರಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 9 ಬುಲೆಟ್ ಸೇರಿ 18 ಲಕ್ಷ ಮೌಲ್ಯದ ಒಟ್ಟು 11 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿನ ಹೊಸೂರು ಮೂಲದ ಸತೀಶ್ (24)ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬೆಂಗಳೂರು ನಗರದ ಅಶೋಕ ನಗರ, ಬಸವನಗುಡಿ, ಜಯನಗರ ಸೇರಿದಂತೆ ವಿವಿದೆಡೆ ಬೈಕ್ ಕಳ್ಳತನ ನಡೆಸಿದ್ದು ಸತೀಶ್ ಗೆ ಮೆಹಬೂಬ್, ನದೀಮ್, ಮುನೀರ್, ರಹೀಂ, ಶ್ರೀಧರ್ ಎಂಬ ಐವರು ಸಾಥ್ ನೀಡಿದ್ದಾರಂತೆ. ಆ ಐವರು ಖತರ್ನಾಕ್ ಬುಲೆಟ್ ಕಳ್ಳರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಂಗಾರಪೇಟೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.