ಪ್ರಮುಖ ಸುದ್ದಿ
ನೆರೆ, ನಿರಾಶ್ರಿತರಿಗೆ ತಕ್ಷಣ ಪರಿಹಾರ ನೀಡಲು ಕಂದಕೂರ ಒತ್ತಾಯ
ಯಾದಗಿರಿಃ ಗುರುಮಿಠಕಲ್ ಮತಕ್ಷೇತ್ರದಲ್ಲಿ ಹಿಂದೆಂದು ಕಂಡರಿಯದ ಮಳೆಯಾಗಿ ಲೆಕ್ಕಕ್ಕೆಸಿಗದ ಹಾನಿಯಾಗಿರುವುದನ್ನು ನಾಗನಗೌಡ ಕಂದಕೂರ್ ಶಾಸಕರು ಗುರುಮಿಠಕಲ್ ಮತಕ್ಷೇತ್ರ ಇವರು ಇಂದು ಲಿಂಗೇರಿ, ಕೌಳೂರು ಮತ್ತು ಮಲ್ಹಾರ್ ಗ್ರಾಮಗಳಿಗೆ ತೆರಳಿ ಖುದ್ದಾಗಿ ಹಾನಿಯಾಗಿರುವುದನ್ನು ವೀಕ್ಷಿಸುವುದರ ಜೊತೆಗೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ಅತಿವೃಷ್ಠಿ ಹಾಗೂ ಪ್ರವಾಹದಿಂದ ಆಗಿರುವ ಬೆಳೆಹಾನಿ, ಕೊಚ್ಚಿಕೊಂಡು ಹೋದ ರಸ್ತೆಗಳು ಹಗೂ ಸೇತುವೆಗಳು ಖುದ್ದಾಗಿ ವೀಕ್ಷಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.
ಕ್ಷೇತ್ರದಲ್ಲಿ ಅಪರ ಪ್ರಮಾಣದ ಬಬೆಳೆ ಹಾನಿಯಾಗಿದ್ದಲ್ಲದೇ ಮನೆಯಲ್ಲದ ದವಸ ಧಾನ್ಯಗಳು ನೀರು ಪಾಲಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಹಾಗೂ ಬೆಳೆಗಳೆಲ್ಲ ಸಂಪೂರ್ಣ ನಾಶವಾಗಿವೆ ಪರಿಸ್ಥೀತಿ ಅವಲೋಕಿಸಲು ಆಗಮಿಸಿರುವ ಮಾನ್ಯ ಮುಖ್ಯಮಂತ್ರಿಗೆ ಹೆಚ್ಚಿನ ಪರಿಹಾರ ನೀಡಲು ಕೋರುತ್ತೇನೆ.