ಪ್ರಮುಖ ಸುದ್ದಿ
ಬೈಕ್-ಬೈಕ್ ನಡುವೆ ಡಿಕ್ಕಿ ಇಬ್ಬರ ಸಾವು
ಬೈಕ್-ಬೈಕ್ ನಡುವೆ ಡಿಕ್ಕಿ ಇಬ್ಬರ ಸಾವು
ಶಹಾಪುರಃ ನಗರದ ಯಾದಗಿರಿ ರಸ್ತೆ ಮಧ್ಯದಲ್ಲಿ ಜೈನ್ ಶಾಲೆ ಹತ್ತಿರ ಪರಸ್ಪರ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತ ಬೈಕ್ ಸವಾರರ ಎರಡು ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಓರ್ವ ಬೈಕ್ ಸವಾರ ತಾಲೂಕಿನ ಚನ್ನೂರ ಗ್ರಾಮದವರೆಂದು ಹೇಳಲಾಗುತ್ತಿದ್ದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಇನ್ನೋರ್ವ ತಾಲೂಕಿನ ದೋರನಹಳ್ಳಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ (26) ಎಂದು ಗುರುತಿಸಲಾಗಿದ್ದು, ಶಹಾಪುರ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ರೋಗಿಗಳ ಸಹಾಯಕ ಚಿಕಿತ್ಸಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
ರಾತ್ರಿ ಕೆಲಸದ ನಿಮಿತ್ತ ಬೈಕ್ ಮೇಲೆ ಹೊರಟಿರುವಾಗ ಅಪಘಾತ ನಡೆದಿದೆ ಎನ್ನಲಾಗಿದೆ. ಶಹಾಪುರ ಠಾಣಾ ವ್ಯಾಪ್ತಿ ಘಟನೆ ಸಂಭವಿಸಿದೆ.