Homeಪ್ರಮುಖ ಸುದ್ದಿ
ಭಾರತೀಯ ಪೌರತ್ವಕ್ಕಾಗಿ ಕರ್ನಾಟಕದಿಂದ 145 ಮಂದಿ ಅರ್ಜಿ
ಬೆಂಗಳೂರು : ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ಕರ್ನಾಟಕದಿಂದ ಒಟ್ಟು 145 ಮಂದಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಅವರು ತಮ್ಮ ಅರ್ಜಿಗಳನ್ನು ಅಂಚೆ ಇಲಾಖೆಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ರಾಯಚೂರಿನಿಂದ 143 ಮತ್ತು ದಕ್ಷಿಣ ಕನ್ನಡದಿಂದ ಎರಡು ಅರ್ಜಿಗಳು ಬಂದಿವೆ. ಅವರಲ್ಲಿ ಹೆಚ್ಚಿನವರು ಪಾಕಿಸ್ತಾನದಿಂದ ಬಂದ ಹಿಂದೂಗಳು. ಇದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಅರ್ಜಿಗಳನ್ನು ಕಳುಹಿಸಲು ಯಾವುದೇ ಗಡುವು ಇಲ್ಲ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ನಾಲ್ಕು ವಿಭಾಗೀಯ ಕಚೇರಿಗಳಿದ್ದು, ಅಲ್ಲಿ ಒಂದು ಅರ್ಜಿಯನ್ನೂ ಸ್ವೀಕರಿಸಿಲ್ಲ ಎಂದು ಅಂಚೆ ಇಲಾಖೆ ಮೂಲಗಳು ಹೇಳಿವೆ.ಸಿಎಎ ಅಡಿ ಪೌರತ್ವಕ್ಕೆ ದೇಶಾದ್ಯಂತ ಸುಮಾರು 12,000 ಮಂದಿ ಈವರೆಗೆ ಅರ್ಜಿ ಸಲ್ಲಿಸಿದ್ದು, ಇತ್ತೀಚೆಗೆ 300 ಮಂದಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಗಿದೆ.