ದೇಶಮುಖ ಕಾಂಪ್ಲೆಕ್ಸ್ ಎದುರು ನೂತನ ಕಟ್ಟಡಕ್ಕೆ ಕೆನರಾ ಬ್ಯಾಂಕ್ ಸಿಫ್ಟ್
yadgiri, ಶಹಾಪುರಃ ಕಳೆದ 4 ದಶಕಗಳಿಂದ ಗ್ರಾಹಕ ಸ್ನೇಹಿ ವಾತಾವರಣ ಹೊಂದಿದ್ದ ನಗರದ ಜನತೆಯ ಉಸಿರಾಗಿ ಅದರಲ್ಲಿ ರೈತರಿಗೆ ನೆರವಿನ ಅಭಯ ನೀಡುತ್ತ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್ ಇನ್ನೂ ಹೆಚ್ಚಿನ ಗ್ರಾಹಕರ ಸೇವೆಗಾಗಿ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಯಾದಗಿರಿ ಕೆನರಾ ಬ್ಯಾಂಕ್ ರಿಟೆಲ್ ಅಸೆಟ್ ಹಬ್‍ನ ವಿಭಾಗೀಯ ಅಧಿಕಾರಿ ಜಿ.ಹುಲತ್ತೆಪ್ಪ ಹೇಳಿದರು.
ಹೆದ್ದಾರಿಗೆ ಹೊಂದಿಕೊಂಡಿದ್ದು ನೂತನ ಬಸ್ ನಿಲ್ದಾಣದ ಹತ್ತಿರವಿರುವ ದೇಶಮುಖ ಕಾಂಪ್ಲೇಕ್ಸ್ ಎದುರುಗಡೆ ಇರುವುದರಿಂದ ಸಾರಿಗೆ ಸಂಪರ್ಕ ಅನುಕೂಲವಿದೆ 220 ಕೋಟಿ ವ್ಯವಹಾರ ಹೊಂದಿರುವ ಈ ಶಾಖೆಯು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವ್ಯವಹಾರ ಹೋಂದಿರುವ ಶಾಖೆಯಾಗಿದೆ. ಬ್ಯಾಂಕ್ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನಗರದ ಹೃದಯ ಭಾಗದಲ್ಲಿದ್ದ ಶಾಖೆಯನ್ನು ಇನ್ನೂ ಹೆಚ್ಚಿನ ಗ್ರಾಹಕ ಸ್ನೇಹಿಯನ್ನಾಗಿ ಮಾಡಲು ಸ್ಥಳಾಂತರಿಸಲಾಗಿದೆ ಎಂದು ಶಾಖೆಯ ಹಿರಿಯ ವ್ಯವಸ್ಥಾಪಕ ಚನ್ನಬಸಯ್ಯ ಹಿರೇಮಠ ಹೇಳಿದರು.
ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ವ್ಯವಸ್ಥಾಪಕ ಯಮನಪ್ಪ, ಕೃಷಿ ಅಧಿಕಾರಿ ತೇಜಸ್, ವ್ಯವಸ್ಥಾಪಕ ಅನಿಲಕುಮಾರ, ಅಜೀತ್, ಪ್ರವೀಣ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುಂಡಪ್ಪ ತುಂಬಗಿ, ವಕೀಲರಾದ ಚಂದ್ರಶೇಖರ ಲಿಂಗದಳ್ಳಿ, ವಿಶ್ವನಾಥ ಜವಳಿ, ಶರಣಪ್ಪ ಪಾಲ್ಕಿ, ಶ್ರೀಕಾಂತ ಜೈನ್, ಇನ್ನಿತರರಿದ್ದರು.