ಪ್ರಮುಖ ಸುದ್ದಿ

ವೇಶ್ಯಾವಾಟಿಕೆ ಸ್ಥಳದಲ್ಲಿ ಪತ್ತೆಯಾದ ವ್ಯಕ್ತಿಯನ್ನು ಬಂಧಿಸುವಂತಿಲ್ಲ, ಕಾನೂನು ಕ್ರಮವು ಇಲ್ಲ ಹೈಕೋರ್ಟ್ ಆದೇಶ

ವೇಶ್ಯಾವಾಟಿಕೆ ಸ್ಥಳದಲ್ಲಿ ಪತ್ತೆಯಾದ ವ್ಯಕ್ತಿ ವಿರುದ್ಧ ಕಾನೂನು ಕ್ರಮವು ಇಲ್ಲ.!

ವೇಶ್ಯಾವಾಟಿಕೆ ಸ್ಥಳದಲ್ಲಿ ಪತ್ತೆಯಾದ ವ್ಯಕ್ತಿಯನ್ನು ಬಂಧಿಸುವಂತಿಲ್ಲ, ಕಾನೂನು ಕ್ರಮವು ಇಲ್ಲ ಹೈಕೋರ್ಟ್ ಆದೇಶ

ಬೆಂಗಳೂರು: ವೇಶ್ಯಾವಾಟಿಕೆ ನಡೆಯುವ ಸ್ಥಳದಲ್ಲಿ ಪತ್ತೆಯಾದ ಗ್ರಾಹಕನ ವಿರುದ್ಧ ಅನೈತಿಕ ಕಳ್ಳ ಸಾಗಣೆಯ ಅಪರಾಧಗಳಿಗಾಗಿ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ. ದಾಳಿ ವೇಳೆ ವೇಶ್ಯಾಗ್ರಹದಲ್ಲಿರುವ ಗ್ರಾಹಕರನ್ನು ಕ್ರಿಮಿನಲ್ ಮೊಕದ್ದಮೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಆದೇಶಿಸಿದ್ದಾರೆ.

ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ವೇಶ್ಯಾಗೃಹದಲ್ಲಿ ಗ್ರಾಹಕರಾಗಿದ್ದರು. ಅವರು ವೇಶ್ಯಾಗೃಹಕ್ಕೆ ಹೋದಾಗಲೇ ಅಲ್ಲಿ ದಾಳಿ ನಡೆದಿತ್ತು. ಹೀಗಾಗಿ, ಆತನನ್ನು ಕೂಡ ಬಂಧಿಸಿ, ಆತನ ವಿರುದ್ದ ಸೆಕ್ಷನ್ 3 (ವೇಶ್ಯಾಗೃಹ ಇರಿಸುವ ಶಿಕ್ಷೆ ಅಥವಾ ಆವರಣವನ್ನು ವೇಶ್ಯಾವಾಟಿಕೆಯಾಗಿ ಬಳಸಲು ಅನುಮತಿ), ಐಪಿಸಿ ಸೆಕ್ಷನ್ 4 (ವೇಶ್ಯಾವಾಟಿಕೆಯ ಗಳಿಕೆಯ ಮೇಲೆ ಜೀವನ), ಸೆಕ್ಷನ್ 5 (ವೇಶ್ಯಾವಾಟಿಕೆಗಾಗಿ ವ್ಯಕ್ತಿಯನ್ನು ಪ್ರೇರೇಪಿಸುವುದು ಅಥವಾ ಕರೆದೊಯ್ಯುವುದು) ಮತ್ತು ಅನೈತಿಕ ಸಂಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 370 (ವ್ಯಕ್ತಿಗಳ ಕಳ್ಳಸಾಗಣೆ) ಸೆಕ್ಷನ್ 6 (ವೇಶ್ಯಾವಾಟಿಕೆ ನಡೆಸುವ ಆವರಣದಲ್ಲಿ ವ್ಯಕ್ತಿಯನ್ನು ಬಂಧಿಸುವುದು) ಕೇಸ್ ದಾಖಲಿಸಲಾಗಿತ್ತು. ಈ ಪ್ರಕರಣ ಪ್ರಶ್ನಿಸಿ ಆ ಗ್ರಾಹಕ ಹೈಕೋಟ್೵ ಮೊರೆ ಹೋಗಿದ್ದರು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಮೇಲೆ ತಿಳಿಸಿದಂತೆ ಆದೇಶ ಹೊರಡಿಸಿದೆ.

Related Articles

Leave a Reply

Your email address will not be published. Required fields are marked *

Back to top button