ತುಕ್ಡೆ ತುಕ್ಡೆ ಗ್ಯಾಂಗ್ ಏನನ್ನೂ ಮಾಡುವಂತಿಲ್ಲ-ಶ್ರೀರವಿಶಂಕರ್ ಗುರೂಜಿ
vv desk-ಭಾರತದ ಫ್ಯಾಬ್ರಿಕ್ ಎಂದರೆ ಅದನ್ನು ಯಾರೂ ಮುರಿಯುವುದಕ್ಕೆ ಸಾಧ್ಯವಿಲ್ಲ. ಈ ತುಕ್ಡೆ-ತುಕ್ಡೆ ಗ್ಯಾಂಗ್ ಈ ದೇಶಕ್ಕೆ ಏನನ್ನೂ ಮಾಡುವಂತಿಲ್ಲ. ಗಲಭೆ ನಡೆದ ನಂತರವೂ ಎರಡೂ ಕೋಮಿನ ಜನರು ಒಬ್ಬರಿಗೊಬ್ಬರು ಸಹಾಯ ಮಾಡುತ್ತಲೇ ಇದ್ದಾರೆ ಎಂದು ಆಟ್ ಆಫ್ ಲಿವಿಂಗ್ ನ ಶ್ರೀಶ್ರೀ ರವಿಶಂಕರ ಗುರುಜಿ ತಿಳಿಸಿದರು.
ಆಧ್ಯಾತ್ಮ ಗುರು ಹಾಗೂ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ರವಿವಾರ ದೆಹಲಿಯಲ್ಲಿ ಈಶಾನ್ಯ ದಿಲ್ಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ಥರಿಗೆ ಧೈರ್ಯ ತುಂಬಿದರು. ಭೇಟಿಯ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆಗಳನ್ನು ಪ್ರಚೋದಿಸುವ ಪ್ರಯತ್ನದ ನಂತರವೂ ಹೇಗೆ, ಎರಡು ಸಮುದಾಯಗಳು ಈಗಲೂ ಪರಸ್ಪರ ಸಹಾಯ ಸಹಕಾರದೊಂದಿಗೆ ನಿಂತಿವೆ.
ಇಲ್ಲಿ ಮಾನವತಾವಾದ ಅರ್ಥವಿದೆ. ಇಂತಹ ಸನ್ನಿವೇಶ ನಿರ್ಮಾಣ ವಿಶ್ವಾಸ, ನಂಬಿಕೆ ಮುಖ್ಯ, ಎಂದರು. “ಹೌದು ಕೆಲವರಿಗೆ ನೋವಾಗಿದೆ, ನಾವು ಅದನ್ನು ಬಗೆಹರಿಸಬೇಕು, ಆದರೆ ಜನರು ಈ ಆಘಾತದಿಂದ ಹೊರಬರಲು ಅವರಿಗೆ ಸಹಾನುಭೂತಿಯನ್ನು ನೀಡಲು ಒಟ್ಟಿಗೆ ಬರಬೇಕಿದೆ ಎಂದರು.