ದೋರನಹಳ್ಳಿ ಪ್ರೀಮಿಯರ್ ಲೀಗ್ ಟೂರ್ನಾಮೆಂಟ್ – ನೋಂದಣಿ ಆರಂಭ
ಕ್ರಿಕೆಟ್ ನ ಡಿಪಿಎಲ್ ೪ ಗೆ ನೋಂದಣಿ ಆರಂಭ

ಕ್ರಿಕೆಟ್ ನ ಡಿಪಿಎಲ್ ೪ ಗೆ ನೋಂದಣಿ ಆರಂಭ
Vinayavani news portal
ಶಹಾಪುರಃ ಕಳೆದ ಮೂರು ವರ್ಷಗಳಿಂದ ಕ್ರಿಕೆಟ್ ನ ಡಿಪಿಎಲ್ ಟೂರ್ನಮೆಂಟ್ ಯಶಸ್ವಿಯಾಗಿ ನಡೆದಿದ್ದು ನಾಲ್ಕನೇ ಡಿಪಿಎಲ್ ಟೂರ್ನಮೆಂಟ್ ಗೆ ನೋಂದಣಿ ಆರಂಭವಾಗಿದೆ ಎಂದು ಡಿಪಿಎಲ್ ಟೂರ್ನಮೆಂಟ್ ಆಯೋಜಕ ಎಂಸಿಸಿ ಮುಖ್ಯಸ್ಥ ಅಮರೀಶ ಗೋಲಗೇರಿ ಹಾಗೂ ಸಮಿತಿಯ ಸದಸ್ಯರು ಹೇಳಿದ್ದಾರೆ.
ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಡಿಪಿಎಲ್ ಟೂರ್ನಮೆಂಟ್ ಅಂಗವಾಗಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ೨೦೨೦ ರಲ್ಲಿ ಶ್ರೀ ಮಹಾಂತೇಶ್ವರ ಕ್ರಿಕೆಟ್ ಕ್ಲಬ್ ನ ಆಯೋಜನೆಯಲ್ಲಿ ಆರಂಭವಾದ ದೋರನಹಳ್ಳಿ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ೨೦೨೦, ೨೦೨೧ , ೨೦೨೨ ರಲ್ಲಿ ಸತತ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಈಗ ೨೦೨೫ ರಲ್ಲಿ ನಾಲ್ಕನೇ ಡಿಪಿಎಲ್ ಟೂರ್ನಮೆಂಟ್ ಆಯೋಜನೆ ಮಾಡುತ್ತಿದ್ದೇವೆ. ಕಳೆದ ಮೂರು ಟೂರ್ನಮೆಂಟ್ ಗೆ ಸಹಕಾರ ನೀಡಿದಂತೆ ಎಲ್ಲರ ಸಹಕಾರ ಅಗತ್ಯವಿದೆ.
ಡಿಪಿಎಲ್ ಟೂರ್ನಮೆಂಟ್ ನಲ್ಲಿ ದೋರನಹಳ್ಳಿ , ಬೇವಿನಹಳ್ಳಿ, ದೋರನಹಳ್ಳಿ ತಾಂಡಾ, ಕನ್ಯಾಕೋಳೂರು, ಹುರಸಗುಂಡಗಿ ಗ್ರಾಮದವರಿಗೆ ಮಾತ್ರ ಪ್ರವೇಶವಿದ್ದು ಪ್ರತಿಯೊಬ್ಬ ಆಟಗಾರನು ತಮ್ಮ ಅಗತ್ಯ ದಾಖಲೆಗಳು ಮತ್ತು ಪ್ರವೇಶ ಶುಲ್ಕದೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.
ಮಾ.೨೬ ನೋಂದಣಿಗೆ ಕೊನೆ ದಿನವಾಗಿದ್ದು, ಮಾ.೩೦ ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಿದ್ದು ಹೆಚ್ಚಿನ ಮಾಹಿತಿಗಾಗಿ 9900487795, 9535658781 ಸಂಖ್ಯೆಗೆ ಸಂಪರ್ಕಿಸಿ ಸಂಪೂರ್ಣವಾಗಿ ಮಾಹಿತಿ ಪಡೆಯಬಹುದಾಗಿದೆ ಎಂದು ಶ್ರೀ ಮಹಾಂತೇಶ್ವರ ಕ್ರಿಕೆಟ್ ಕ್ಲಬ್ ನ ಮುಖ್ಯಸ್ಥ ಡಿಪಿಎಲ್ ಆಯೋಜಕ ಅಮರೀಶ ಗೋಲಗೇರಿ ಹಾಗೂ ಸಮಿತಿಯ ಸರ್ವ ಸದಸ್ಯರು ತಿಳಿಸಿದ್ದಾರೆ.