ಬೆಂಬಿಡದ ಸಿಡಿ ಗುಮ್ಮಃ ನ್ಯಾಯಾಲಯದ ಮೊರೆ ಹೋದ ಸಚಿವರು
ವಿವಿ ಡೆಸ್ಕ್ಃ ಜಾರಕಿಹೊಳಿ ಸಿಡಿ ಬಿಡುಗಡೆ ಬೆನ್ನಲ್ಲೆ ದಿನೇಶ ಕಲ್ಲಹಳ್ಳಿ ಮತ್ತೊಂದು ಬಾಂಬ್ ಸಿಡಿಸಿದ್ದು, ಮೈಸೂರ ಭಾಗದ ಪ್ರಭಾವಿ ಸಚಿವರೊಬ್ಬರ ಜಾರಕಿಹೊಳೆ ಬ್ಲೂಸಿಡಿ ಗಿಂತ ಅಸಹ್ಯವಾಗಿರುವ ಸಿಡಿಯನ್ನು ಇಷ್ಟರಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬಾಂಬೆ ಮಿತ್ರ ಮಂಡಳಿಯ 6 ಜನ ಸಚಿವರು ಈಗಾಗಲೇ ಮಾಧ್ಯಮದಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ನಿಟ್ಟಿನಲ್ಲಿ ಬಾಂಬೆಯಲ್ಲಿ ಬೀಡು ಬಿಟ್ಟಿದ್ದ 16-17 ಜನ ಎಂಎಲ್ಎ ಗಳು ಇದೀಗ ಜಾರಕಿಹೊಳೆ ಸಿಡಿ ಬಿಡುಗಡೆ ಬಿಸಿ ತಟ್ಟುತ್ತಿದ್ದಂತೆ ಎಚ್ವೆತ್ತುಕೊಂಡು ತಮ್ಮ ವಿರುದ್ಧ ರಾಜಕೀಯ ಷಡ್ಯಂತರ ನಡೆಸಿರುಬಹುದು ತಮ್ಮ ಮಾನಹಾನಿಕರ ಸುದ್ದಿಗಳಿಗೆ ನಿರ್ಬಂಧಸುವಂತೆ ನ್ಯಾಯಾಲಯದ ಮೊರೆ ಹೋಗುತ್ತಿರುವದು ಸಾರ್ವಜನಿಕ ವಲಯದಲ್ಲಿ ಹಲವಾರು ವಿಚಾರಗಳಿಗೆ ಎಡೆ ಮಾಡಿಕೊಟ್ಟಿದೆ ಎನ್ನಬಹುದು.
ಈಗಾಗಲೇ 6 ಜನ ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದು ವಿಚಾರಣೆ ನಡೆಸಿರುವ ನ್ಯಾಯಾಲಯ ಈ ಕುರಿತು ನಾಳೆ ಆದೇಶ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಕುತುಹಲ ಕೆರಳಿಸಿದೆ.