ಪ್ರಮುಖ ಸುದ್ದಿ
ರಾಜ್ಯದಲ್ಲಿ ಮತ್ತೇ ಬಿಜೆಪಿ ಸರ್ಕಾರ ರಚನೆ-ಕೇಂದ್ರ ಸಚಿವ ಹರ್ಷವರ್ಧನ
ಕರ್ನಾಟಕ ದಲ್ಲಿ ಮತ್ತೇ ಬಿಜೆಪಿ ಸರ್ಕಾರ ರಚನೆ ಕೇಂದ್ರ ಸಚಿವ ಹರ್ಷವರ್ಧನ ಹೇಳಿಕೆ
ಬೆಳಗಾವಿಃ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಮೈತ್ರಿ ಸರ್ಕಾರಕ್ಕೆ ಸಾಕಷ್ಟು ರೋಗಗಳಿವೆ. ಮೋಸದಿಂದ ಮೈತ್ರಿಯಾಗಿ ಸರ್ಕಾರ ರಚಿಸುವೆ ಜಾಸ್ತಿ ದಿನ ಬದುಕಲ್ಲ ಎಂದು ಕೇಂದ್ರ ಸಚಿವ ಹರ್ಷವರ್ಧನ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಲೋಕಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಮತ್ತೇ ಮೋದಿ ಪ್ರಧಾನಿಯಾಗಲಿದ್ದಾರೆ.
ಮುಂಬರುವ ದಿನಗಳಲ್ಲಿ ಬಿಜೆಪಿಗೆ ಒಳಿತಾಗಲಿದೆ. ಇಲ್ಲಿ ರಾಜ್ಯ ಸರ್ಕಾರವು ಮತ್ತೇ ಬಿಜೆಪಿಯೇ ಆಗಲಿದೆ. ಆದರೆ ವಿಧಾನಸಭೆ ಚುನಾವಣೆಯೋ ಬರತ್ತೋ ಅಥವಾ ಇದೇ ಸರ್ಕಾರ ಬಿದ್ದು ಬಿಜೆಪಿ ರಾಜ್ಯದ ಚುಕ್ಕಾಣಿ ಹಿಡಿಯುತ್ತದೆ ಯೋ ಗೊತ್ತಿಲ್ಲ. ಒಟ್ಟಾರೆ ಬಿಜೆಪಿಗೆ ಇತಾಗಲಿದೆ ಎಂದು ತಿಳಿಸಿದ್ದಾರೆ.