ಪ್ರಮುಖ ಸುದ್ದಿ

ಶಹಾಪುರಃ ವಿವಿಧ ಗ್ರಾಮಗಳಿಗೆ ಜಿಪಂ ಸಿಇಓ ಶಿಲ್ಪಾ ಶರ್ಮಾ ಭೇಟಿ

ಕುಡಿಯುವ ನೀರು, ನಾಗರಿಕರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೂಚನೆ

ಯಾದಗಿರಿ,ಶಹಾಪುರಃ ತಾಲೂಕಿನ ಹಬ್ಬಳ್ಳಿ, ಮರಮಕಲ್, ಸಲಾದಪೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ಮಂಗಳವಾರ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ ಆಯಾ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಆರ್‍ಓ ಪ್ಲಾಂಟ್ ಗಳನ್ನು ವೀಕ್ಷಿಸಿದರು.

ಅಲ್ಲದೆ ಗ್ರಾಮಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದರು, ಹಳ್ಳಿಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ಅವಶ್ಯಕತೆಯಾಗಿದ್ದು, ಜನರ ಬೇಡಿಕೆಗೆ ಶೀಘ್ರ ಸ್ಪಂಧನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೊರೊನಾ ವೈರಸ್‍ನಿಂದ ಇಡಿ ದೇಶ ತಲ್ಲಣಗೊಂಡಿದ್ದು, ಲಾಕ್ ಡೌನ್ ನೀತಿ ಅಳವಡಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಸಾಮಾಜಿಕ ಅಂತರತೆಯನ್ನು ಕಾಯ್ದುಕೊಳ್ಳುವಂತೆ ಮನವರಿಕೆ ಮಾಡಿದರು. ಯಾರೊಬ್ಬರು ಹಸಿವಿನಿಂದ ಬಳಲಬಾರದು. ಅಂತಹ ಸ್ಥಿತಿ ಇದ್ದಲ್ಲಿ ಕೂಡಲೇ ಗ್ರಾಪಂ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಆಹಾರ ಧಾನ್ಯ ಒದಗಿಸುವ ವ್ಯವಸ್ಥೆ ಮಾಡಲಾಗುವದು.

ಅಲ್ಲದೆ ರೇಷನ್ ವಿತರಿಸಲು ಸೂಚಿಸಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ರಾಜಕುಮಾರ ಪತ್ತಾರ ಸೇರಿದಂತೆ ಗ್ರಾಮದ ಮುಖಂಡರು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button