ಕಾವ್ಯ

ಕಾವ್ಯದೊಂದಿಗೆ ಪದಗಳ ಆಟ – ಚಾಗಿ ಬರೆದ ಗಜಲ್

**ಗಜಲ್**

ಕಾಶದ ಅಂಗಳದಲ್ಲಿರುವ ಚುಕ್ಕಿಗಳಿಗೆ ಆಟವನು ಹೇಳಿಕೊಟ್ಟವರಾರು
ಬದುಕಿನ ಗರಡಿಯಲ್ಲಿರುವ ಸುಖದುಃಖಗಳಿಗೆ ಆಟವನು ಹೇಳಿಕೊಟ್ಟವರಾರು

ಕಲ್ಲು ಮುಳ್ಳಿನ ಹಾದಿಯಲೂ ಹೂವಿನ ಹಾಸಿಗೆಯನು ಹಾಸಿದೆ
ನೆಮ್ಮದಿಯ ನಿದಿರೆಯಲ್ಲಿರುವ ಕನಸುಗಳಿಗೆ ಆಟವನು ಹೇಳಿಕೊಟ್ಟವರಾರು

ಕಾಣದೂರಿನ ಪಯಣದಲಿ ಕಥೆಯೊಂದು ಮೌನವಾಗಿ ಸಾಗಿದೆ
ನೋವು ನಲಿವನು ತರಲಿರುವ ಗಂಟೆಗಳಿಗೆ ಆಟವನು ಹೇಳಿಕೊಟ್ಟವರಾರು

ಹೊಸ ಉತ್ಸಾಹವನು ಬಿತ್ತುವ ಸುಳ್ಳುಗಳು ನಗುತ್ತಲಿವೆ
ಜೀವನದ ಜಾಡಿಯಲ್ಲಿರುವ ಕಥೆಗಳಿಗೆ ಆಟವನು ಹೇಳಿಕೊಟ್ಟವರಾರು

ನೂರಾರು ದೃಶ್ಯಗಳನು ಕಂಡ ಕಣ್ಣುಗಳ ಕಾಂತಿ ತಂಪು ಸೂಸುತ್ತಿದೆ
ಚಾಗಿಯ ಸಂಗದಲ್ಲಿರುವ ಕವನಗಳಿಗೆ ಆಟವನು ಹೇಳಿಕೊಟ್ಟವರಾರು ||

ವೆಂಕಟೇಶ ಚಾಗಿ.

Related Articles

Leave a Reply

Your email address will not be published. Required fields are marked *

Back to top button