ಪ್ರಮುಖ ಸುದ್ದಿ
ಹಾಜರಿ ಹಾಕಿ, ಕರ್ತವ್ಯಗೆ ಹಾಜರಿರದ ವೈದ್ಯರ ಅಮಾನತಿಗೆ ಚವ್ಹಾಣ ಸೂಚನೆ
ಜಿಲ್ಲಾಸ್ಪತ್ರೆಗೆ ದಿಡೀರ್ ಭೇಟಿ ನೀಡಿದ ಉಸ್ತುವಾರಿ ಸಚಿವ ಪ್ರಭು ಚವ್ಹಾಣ
ಯಾದಗಿರಿಃ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಮೇಲೆ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಚಿವ ಪ್ರಭು ಚವ್ಹಾಣ, ಇಲ್ಲಿನ ಜಿಲ್ಲಾಸ್ಪತ್ರೆಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕಂಡು ಬಂದ ಅವ್ಯವಸ್ಥೆ ಕುರಿತು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾಜರಿ ಪುಸ್ತಕ ಚಕ್ ಮಾಡುವ ಮೂಲಕ ಕರ್ತವ್ಯಕ್ಕೆ ಹಾಜರಾಗದೇ ಸಹಿ ಹಾಕಿರುವದನ್ನು ಕಂಡು ಸ್ಥಳದಲ್ಲಿಯೇ ಓರ್ವ ವೈದ್ಯರ ಅಮಾನತಿಗೆ ಆದೇಶಿಸಿದರು.
ವಾರ್ತಾ ಇಲಾಖೆ ವಾಹನದಲ್ಲಿಯೇ ಪತ್ರಕರ್ತರೊಂದಿಗೆ ಸರ್ಕಾರಿ ಜಿಲ್ಲಾಸ್ಪತ್ರೆಗೆ ತೆರಳಿದ್ದ ಸಚಿವರು, ಆಸ್ಪತ್ರೆ ಸ್ಥಿತಿಗತಿ ಕಂಡು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದರು.