ಪ್ರಮುಖ ಸುದ್ದಿವಿನಯ ವಿಶೇಷ

ಚಂದ್ರಯಾನ-2 : ಚಂದಿರಲೋಕದತ್ತ ಯಶಸ್ವಿ ಪಯಣ

ಚನ್ನೈ: ಇಂದು ಮದ್ಯಾನ 2:43ಕ್ಕೆ ಸರಿಯಾಗಿ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆಗೊಂಡಿದೆ. ಚಂದ್ರಯಾನ ವಿಕ್ರಂ ಲ್ಯಾಂಡರ್ ನೌಕೆ ಮತ್ತು ಪ್ರಗ್ನಾನ್ ರೋವರ್ ನೌಕೆಯನ್ನು ಒಳಗೊಂಡಿದೆ. ಇದುವರೆಗೂ ಯಾವುದೇ ದೇಶದ ನೌಕೆ ತಲುಪದ, ಕತ್ತಲೇ ತುಂಬಿರುವ ಚಂದ್ರನ ದಕ್ಷಿಣ ದೃವಕ್ಕೆ ಇಳಿಯಲಿದೆ. ಆ ಮೂಲಕ ಅಲ್ಲಿನ ಪಳಿಯುಳಿಕೆಗಳ ಅಧ್ಯಯನ ನಡೆಸಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಲಿದೆ ಎಂದು ಇಸ್ರೋ ಮುಖ್ಯಸ್ಥ ಶಿವನ್ ಮಾಹಿತಿ ನೀಡಿದ್ದಾರೆ.

ಜುಲೈ 15ನೇ ತಾರೀಕು ಇಸ್ರೋ ಸಂಸ್ಥೆಯ ಚಂದ್ರಯಾನ-2 ರಾಕೆಟ್​ ಉಡಾವಣೆಯಾಗಬೇಕಿತ್ತು. ಆದರೆ, ರಾಕೆಟ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಡ್ಡಯನಕ್ಕೆ 56 ನಿಮಿಷ 24 ಸೆಕೆಂಡ್​ ಇರುವಂತೆ ಉಡ್ಡಯನ ರದ್ದಾಗಿತ್ತು. ಆದರೆ, ಜುಲೈ 15ನೇ ತಾರೀಕು ಯಶಸ್ವಿ ಚಂದ್ರಯಾನ-2 ಉಡಾವಣೆಯಾಗಿದ್ದರೆ ಸೆಪ್ಟಂಬರ್​ 6ನೇ ತಾರೀಕು ರಾಕೆಟ್​ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುತ್ತಿತ್ತು. ಆದರೆ ತಡವಾಗಿ ಉಡ್ಡಯನಗೊಂಡರೂ ಸಹ ವೇಗ ಹೆಚ್ಚಿಸಿರುವ ಕಾರಣ ಚಂದ್ರಯಾನ-2 ರಾಕೆಟ್​  ಸೆಪ್ಟಂಬರ್​ 6ನೇ ತಾರೀಕಿನಂದೇ ಲ್ಯಾಂಡ್​ ಆಗಲಿದೆ ಎಂದು ತಿಳಿದು ಬಂದಿದೆ.

 

Related Articles

Leave a Reply

Your email address will not be published. Required fields are marked *

Back to top button