ಪ್ರಮುಖ ಸುದ್ದಿ
ಶಹಾಪುರಃತಿಪ್ಪೆಗುಂಡಿಯಲ್ಲಿ ಶವವಾಗಿ ಪತ್ತೆಯಾದ ಮಗು
ತಿಪ್ಪೆಗುಂಡಿಯಲ್ಲಿ ಶವವಾಗಿ ಪತ್ತೆಯಾದ ಮಗು
ಶಹಾಪುರ: ತಾಲೂಕಿನ ಹಯ್ಯಾಳ(ಬಿ) ಗ್ರಾಮದಲ್ಲಿ ಮನೆ ಹಿಂಬದಿಯ ತಿಪ್ಪೆಗುಂಡಿಯಲ್ಲಿ ಆದರ್ಶ ತಂದೆ ಭೀಮರಾಯ (2) ಎಂಬ ಮಗು ನೀರಲ್ಲಿ ಬಿದ್ದು ಮೃತಪಟ್ಟ ಘಟನೆ ಜರುಗಿದೆ.
ಭೀಮರಾಯ ಎಂಬುವರ ಮಗನಾದ ಎರಡು ವರ್ಷದ ಈ ಪೋರ ಮನೆಯಿಂದ ಕಾಣೆಯಾಗೆ ನಾಲ್ಕು ದಿನಗಳು ಕಳೆದಿವೆ. ಪಾಲಕರು ಕುಟುಂಬಸ್ಥರು ಎಲ್ಲಾ ಕಡೆ ಹುಡಿಕಿದರು ಮಗು ಕಂಡು ಬರಲಿಲ್ಲ.
ಆಗ ಸ್ಥಳೀಯ ನಗರಠಾಣೆಗೆ ಮಗು ನಾಪತ್ತೆ ಬಗ್ಗೆ ಪಾಲಕರು ಪ್ರಕರಣ ದಾಖಲಿಸಿದ್ದರು.
ಆದರೆ ಮಂಗಳವಾರ ಮಗು ಮನೆ ಹಿಂದಿನ ತಿಪ್ಪಿಗುಂಡಿಯ ನಿಂತ ನೀರಲ್ಲಿ ಬಿದ್ದು ಸಾವನ್ನಪ್ಪಿರುವುದು ಕಂಡು ಬಂದಿದೆ.
ಆಗ ದಿಕ್ಕು ತೋಚದ ಪಾಲಕರು ಗದ್ಗದಿತರಾಗಿದ್ದಾರೆ. ಮಗುವಿನ ದುರಂತ ಸಾವು ಕಂಡು ದಂಗಾಗಿದ್ದಾರೆ. ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.