ಸಾಹಿತ್ಯ

ಮಕ್ಕಳ ಸಾಹಿತ್ಯದೊಂದಿಗೆ ವಿದ್ಯಾರ್ಥಿಗಳ ಅನುಸಂಧಾನ

ಮಕ್ಕಳ ಸಾಹಿತ್ಯಕ್ಕೆ ಸಮೃದ್ಧ ಬಾಲ್ಯದ ಅನುಭಾವ ಅಗತ್ಯ – ಕರದಳ್ಳಿ

ಯಾದಗಿರಿ, ಶಹಾಪುರಃ ಮಕ್ಕಳ ಸಾಹಿತ್ಯ ಕೃಷಿಗೆ ಸಮೃದ್ಧ ಬಾಲ್ಯದ ಅನುಭವ ಅಗತ್ಯ. ಸಾಹಿತಿಗೆ ಮಗುವಿನ ಮನಸ್ಸು ಇರಬೇಕು. ಬಾಲ್ಯದಲ್ಲಿ ಆಡಿದ ಆಟಗಳ ಹಲವಾರು ಸಂಗತಿಗಳ ಅರಿವಿರಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಚಂದ್ರಕಾಂತ ಕರದಳ್ಳಿ ಅವರು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ಮನೆಯಲ್ಲಿ ಹಮ್ಮಿಕೊಂಡ “ಮಕ್ಕಳ ಸಾಹಿತಿಯ ಸಾಹಿತ್ಯ ವಿದ್ಯಾರ್ಥಿಗಳೊಂದಿಗೆ ಅನುಸಂಧಾನ” ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳ ಸಾಹಿತ್ಯದಲ್ಲಿ ತುಂಬಾ ವೈವಿಧ್ಯತೆಯಿದೆ. ಗ್ರಾಮೀಣ ಸಾಂಸ್ಕøತಿಕ ಪರಿಸರದ ಜನಪದ ಹಾಡುಗಳು, ಆಡುವ ಆಟಗಳು, ಸ್ಥಳಿಯ ಸಂಪನ್ಮೂಲಗಳು, ಪರಿಸರ ಮಕ್ಕಳ ಸಾಹಿತ್ಯ ಕೃಷಿಗೆ ತುಂಬಾ ಪೂರಕವಾಗುತ್ತವೆ.

ಮಕ್ಕಳ ಸಾಹಿತ್ಯ ಹಾಗೂ ವಿವಿಧ ಸಾಹಿತ್ಯ ಪ್ರಕಾರಗಳು ಕುರಿತು ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಾಹಿತ್ಯ ಓದುವದು ಬರೆಯುವುದು ಸೇರಿದಂತೆ ಮನುಷ್ಯನ ಅನುಭಾವ, ಭಾವನೆ ಅಥವಾ ಕಣ್ಣಿಗೆ ಕಂಡ ಹಲವಾರು ದೃಶ್ಯ ವೈವಿಧ್ಯಮಯಗಳನ್ನು ಆಯಾ ವ್ಯಕ್ತಿಯ ಆಲೋಚನೆ, ಚಿಂತನೆ ಮೂಲಕ ಹೊರಹೊಮ್ಮಲಿದೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಕನ್ನಡ ಉಪನ್ಯಾಸಕಿ ಡಾ. ಶೈಲಜಾ ಬಾಗೇವಾಡಿ, ಮಕ್ಕಳ ಸಾಹಿತ್ಯಕ್ಕೆ ವೈವಿಧ್ಯಮಯವಾದ ಮೌಲ್ಯಿಕ ಕೃತಿಗಳನ್ನು ನೀಡಿರುವ ಚಂದ್ರಕಾಂತ ಕರದಳ್ಳಿ ಅವರ ಸಾಹಿತ್ಯ ಕೃಷಿಯಲ್ಲಿ ಮಕ್ಕಳ ಸಂವೇದನೆ, ವಿಷಯ ವೈವಿಧ್ಯತೆ, ಪ್ರಯೋಗಶೀಲತೆ ಮುಂತಾದವುಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ಇಂಗ್ಲೀಷ ಸಹಾಯಕ ಪ್ರಾಧ್ಯಾಪಕ ಆನಂದಕುಮಾರ ಸಾಸನೂರ, ಉಪನ್ಯಾಸಕರಾದ ರಾಘವೇಂದ್ರ ಹಾರಣಗೇರಾ, ಹಣಮಂತಿ ಗುತ್ತೇದಾರ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಜಾತ ಎಸ್. ಹುಲ್ಕಲ್ ಅವರು ಚಂದ್ರಕಾಂತ ಕರದಳ್ಳಿ ಅವರ ಬದುಕು ಬರಹ ಪರಿಚಯಿಸಿದರು. ವಿದ್ಯಾರ್ಥಿ ಮಂಜುನಾಥ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button