ಚಿಂಚೋಳಿ ಬೈ ಎಲೆಕ್ಷನ್ ಕೇಸರಿ ಟಿಕೇಟ್ ಯಾರಿಗೆ ಗೊತ್ತೆ.?
ಚಿಂಚೋಳಿ ಬೈ ಎಲೆಕ್ಷನ್ ಬಿಜೆಪಿ ಟಿಕೆಟ್ ಬದಲು.?
ರಾಮಚಂದ್ರ ಜಾಧವ ಬದಲು ಅವಿನಾಶ ಜಾಧವ
ಚಿಂಚೋಳಿಃ ಚಿಂಚೋಳಿ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿದ್ದ ಉಮೇಶ ಜಾಧವ ರಾಜೀನಾಮೆ ನೀಡಿ, ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಸಂಸದ ಮಲ್ಲಿಕಾರ್ಜುನ ವಿರುದ್ಧ ಸ್ಪರ್ಧಿಸಿ ರಾಷ್ಟ್ರದಾದ್ಯಂತ ಹೆಸರು ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರ ಧೊರಣೆಗೆ ತಮ್ಮನ್ನು ತಮದಮ ಕ್ಷೇತ್ರ ಕಡೆಗಣನೆಗೆ ಬೇಸತ್ತು ಖರ್ಗೆ ವಿರುದ್ಧ ತೊಡೆ ತಟ್ಟಿ ಲೋಕಸಭೆ ಚುನಾವಣೆ ನಡೆಸಿದ್ದಾರೆ. ಈಗಾಗಲೇ ಸೋಲು ಗೆಲುವಿ ಲೆಕ್ಕಾಚಾರಸಲ್ಲಿದ್ದಾರೆ.
ಇದೀಗ ಲೋಕಾಮುಗಿಸಿ ವಿಶ್ರಾಂತಿ ಪಡೆಯುತ್ತಿರುವಾಗಲೇ ಜಾಧವರಿಂದ ತೆರವಾದ ವಿಧಾನಸಭೆ ಕ್ಷೇತ್ರ ಚಿಂಚೋಳಿ ಬೈ ಎಲೆಕ್ಷನ್ ಇದೇ ಮೇ 19 ರಂದು ಚುನಾವಣೆ ಘೋಷಣೆಯಾಗಿದೆ.
ಈ ಹಿನ್ನೆಯಲ್ಲಿ ಅವರು ಚಿಂಚೋಳಿ ಕ್ಷೇತ್ರದಿಂದ ಜಾಧವ ಸಹೋದರ ರಾಮಚಂದ್ರ ಜಾಧವ ಅವರನ್ನು ಬಿಜೆಪಿಯಿಂದ ನಿಲ್ಲಿಸಲು ರಾಜ್ಯ ಬಿಜೆಪಿ ಕೊರ್ ಕಮಿಟಿಯಲ್ಲಿ ನಿರ್ಧರಿಸಲಾಗಿತ್ತು.
ಗುರುವಾರ ಮಧ್ಯಾಹ್ನ ರಾಮಚಂದ್ರ ಜಾಧವ ಹೆಸರು ಶಿಫಾರಸ್ಸು ಮಾಡಲಾಗಿತ್ತು.
ಆದರೆ ಇದೀಗ ಬಂದ ಸುದ್ದಿ ಪ್ರಕಾರ ರಾಮಚಂದ್ರ ಜಾಧವ ಬದಲಿಗೆ ಉಮೇಶ ಜಾಧವ ಅವರ ಪುತ್ರ ಅವಿನಾಶ ಜಾಧವ ಅವರನ್ನು ಕಣಕ್ಕೆ ಇಳಿಸಲು ಕೊನೆ ಹಂತದಲ್ಲಿ ನಿರ್ಧರಿಸಲಾಗಿದೆ ಎಂಬ ಸುದ್ದಿ ಬಿಸಿ ಬಿಸಿ ಚರ್ಚೆಗೆ ಬಂದಿದೆ.
ಕೊನೆ ಕ್ಷಣದಲ್ಲಿ ರಾಮಚಂದ್ರ ಬದಲು ಅವಿನಾಶ ಜಾಧವ ಅವರನ್ನು ಬಿಜೆಪಿ ಟಿಕೆಟ್ ನಿಡಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದ್ದಾರೆ.