ಕಾವ್ಯ
ಕನ್ನಡಮ್ಮನ ಹಣತೆ ಅಶೋಕ ಚೌದ್ರಿ ಬರಹ
ಕನ್ನಡಮ್ಮನ ಹಣತೆ
ನನ್ನ ಹೆತ್ತವಳು ಕನ್ನಡತಿ
ನಮ್ಮನ್ನೆಲ್ಲ ಹೊತ್ತವಳು ಕನ್ನಡತಿ
ಬೆಳಗೋಣ ಬನ್ನಿ ಕನ್ನಡಾರತಿ
ಪ್ರಜ್ವಲಿಸಲಿ ಕನ್ನಡಮ್ಮನ ಕೀರುತಿ.|
ನನ್ನೆದೆಯಲಿಹುದು ಕನ್ನಡದ ಕಾಡು
ಅದರಲಿಹುದು ವಿಶ್ವರೂಪದ ಬೀಡು,
ಆಲಿಸುವೇನು ಅಮೃತಮಯ ಕನ್ನಡ
ಉಳಿಸಿ-ಬಳಸಿ ಬೆಳೆಸುವೇನು ಕನ್ನಡ.||
ಕನ್ನಡಮ್ಮಗೆ ಮುಡಿಸಿರೆ ತೊಡಿಸಿರೆ
ನುಡಿಹಾರ ಪದಗಳಹಾರ ನಡೆಹಾರ
ಎಲ್ಲಡೆ ಪರಸರಿಸಲಿ ಕನ್ನಡಮ್ಮನ ಹೆಸರು
ಅದಕೆ ಮೀಸಲಿರಿಸಿ ಇಮ್ಮಯ ಉಸಿರು.||
ಕನ್ನಡವದು ಸವಿ ಅಮೃತದಂತೆ
ಅಭಿಮಾನವಿರೆ ಋತುವಿನಂತೆ
ತಾಯಿ ಹಾಲಿನ ಪಾನದಂತೆ
ಮೋಸಗೈಯದಿರು ಅನ್ನಕ್ಕೆ ದ್ರೋಹ ಬಗೆದಂತೆ
ಕನ್ನಡದ ಕಂಪಿನ ಐಸಿರಿಗೆ
ಹೊರ ಸೂಸಲಿ ಭಾವ ಸಿರಿ
ಹನಿ-ಗಂಧ-ತೈಲ ಸುರಿಸಿ
ಕನ್ನಡಮ್ಮನ ಹಣತೆ ಬೆಳಗಿಸಿ.||
ಕನ್ಮಡ ಜಾತ್ರೆಯ ಸಂಭ್ರಮ
ಸಾರಸ್ವತ ಲೋಕದ ಕವಿ-ಪುಂಗವರಾಗಮಾ
ಕನ್ನಡದ ಮನಸ್ಸುಗಳ ಸವಿ ಮಿಲನ
ಎಳೆಯುವ ಬನ್ನಿ ಕನ್ನಡಮ್ಮನ ತೇರು.||
ರಚನೆಃ ಅಶೋಕ ಆರ್.ಚೌದ್ರಿ
ವಿಳಾಸ ದೇವಿ ನಗರ ಶಹಾಪುರ-೫೮೫೨೨೩ ಜಿಲ್ಲೆ, ಯಾದಗಿರಿ. ಜಂಗಮ ವಾಣಿಃ೯೪೮೧೪೧೩೮೧೪.