ಮತಾಂತರ ನಿಷೇಧ ಕಾಯ್ದೆ ಚಿಂತನೆ ಕೈ ಬಿಡುವಂತೆ ಆಗ್ರಹಿಸಿ ಮನವಿ
ಮತಾಂತರ ನಿಷೇಧ ಕಾಯ್ದೆ ಚಿಂತನೆ & ಕ್ರೈಸ್ತ ಸಮುದಾಯದ ಚರ್ಚ್, ಸಂಘ ಸಂಸ್ಥೆಗಳ ಗಣತಿ ವಿರೋಧಿ ಮನವಿ
Yadgiri, ಶಹಾಪುರಃ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಕುರಿತು ಚಿಂತನೆ ಮತ್ತು ಹಿಂದುಳಿದ ವರ್ಗ ಇಲಾಖೆಯಿಂದ ಕ್ರೈಸ್ತ ಸಮುದಾಯದ ಚರ್ಚ್ ಹಾಗೂ ಸಂಘ ಸಂಸ್ಥೆಗಳ ಕುರಿತು ಗಣತಿ ನಡೆಸಲು ಆದೇಶ ನೀಡಿರುವದು ಈ ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿ ಇಲ್ಲಿನ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟದಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕ್ರೈಸ್ತ ಸಮುದಾಯ ಶೈಕ್ಷಣಿಕ ವಾಗಿ ಮತ್ತು ಜನರ ಆರೋಗ್ಯ ಸೇವೆ ಸೇರಿದಂತೆ ಇತರೆ ಜನ ಹಿತ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಸೇವಾ ಮನೋಭಾವದಿಂದ ಕ್ರೈಸ್ತ್ ಸಮುದಾಯ, ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ.
ಆದರೆ ರಾಜ್ಯ ಸರ್ಕಾರ ಯಾವುದೋ ಕೋಮುವಾದಿ ಸಂಘಟನೆಗಳ ಮಾತು ಕೇಳಿ ಕ್ರೈಸ್ತ್ ಸಮುದಾಯದ ಮೇಲೆ ಕೆಂಗಣ್ಣು ಬೀರಿದ್ದು ಸರಿಯಲ್ಲ. ಈ ಕೂಡಲೇ ಸಮುದಾಯದ ಗಣತಿ ಕಾರ್ಯ ಆದೇಶ ವಾಪಸ್ ಪಡೆಯಬೇಕು.
ಅಲ್ಲದೆ ಈಗಾಗಲೇ ಕ್ರೈಸ್ತ ಸಮುದಾಯ, ಚರ್ಚ್ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹತ್ತಿರ ಸಂಪೂರ್ಣ ಮಾಹಿತಿ ಇದೆ. ಆದಾಗ್ಯು ಹೊಸದಾಗಿ ಗಣತಿ ಕಾರ್ಯ ನಡೆಸಲು ಸೂಚಿಸಿರುವದು ಅಲ್ಪ ಸಂಖ್ಯಾತರನ್ನು ಒಕ್ಮಲೆಬ್ಬಿಸುವ ಉದ್ದೇಶವಿದೆಯೇ ಎಂದು ಒಕ್ಕೂಟದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಮತ್ತು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಚಿಂತನೆ ನಡೆಸಿದ ಸರ್ಕಾರ ನಿರ್ಧಾರ ಸರಿಯಲ್ಲ. ಎಲ್ಲರಿಗೂ ಸ್ವಾತಂತ್ರ್ಯ ವಿದೆ. ಪ್ರಜಾಸತ್ತಾತ್ಮಕ ಕಾನೂನು ಹೊಂದಿದ ಭಾರತದಲ್ಲಿ ಧಾರ್ಮಿಕ ವಿಚಾರಗಳನ್ನು ಪ್ರಚುರ ಪಡಿಸುವ ಹಕ್ಕಿದೆ. ನಾವು ಅಕ್ರಮವಾಗಿ ಕಾನೂನು ಬಾಹಿರವಾಗಿ ಮತಾಂತರ ಕಾರ್ಯ ಮಾಡುತ್ತಿಲ್ಲ.
ಕೆಲ ದುಷ್ಟ ಸಂಘಟನೆಯವರು ನಮ್ಮ ಸಮುದಾಯದವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು, ಕೂಡಲೇ ಈ ವಿಚಾರವಾಗಿ ಸರ್ಕಾರ ಸಮುದಾಯದ ರಾಜ್ಯ ಪ್ರಮುಖರು, ಸಂಘ, ಸಂಸ್ಥೆಯ ಪದಾಧಿಕಾರಿಗಳು ಸಮುದಾಯದ ಲೀಡರ್ಸ್ ನ್ನು ಕರೆದು ಚರ್ಚಿಸಲಿ ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಕೂಡಲೇ ಮತಾಂತರ ನಿಷೇಧ ಕಾಯ್ದೆ ಚಿಂತನೆ ಕೈಬಿಡಬೇಕು. ಹಾಗೂ ಸಮುದಾಯದ ವಿರುದ್ಧ ಗಣತಿ ಕಾರ್ಯ ಆದೇಶವು ಹಿಂಪಡೆಯಬೇಕೆಂದು ಮನವಿ ಪತ್ರದ ಮೂಲಕ ತಿಳಿಸಿದೆ.
ಈ ಸಂದರ್ಭದಲ್ಲಿ ಸಂತ ಪೇತ್ರ ದೇವಾಲಯದ ಫಾದರ್ ಕ್ಲೀವನ್ ಗೋಮ್ಸ್, ಕ್ರಿಶ್ಚನ್ ಲೀಡರ್ ಫೆಲೋಶಿಪ್ ಅಧ್ಯಕ್ಷ ವಿಜಯರಾಜ್, ಮಂಜು ನಾಯಕ್, ಬಸವರಾಜ, ಎಬಿನೇಜರ್ ಸ್ಯಾಮ್ಯೂಲ್, ಸಿಸ್ಟರ್ ಪ್ರಮೀಳಾ, ಸಿಸ್ಟರ್ ಅನಿಶಾ, ಸಿಸ್ಟರ್ ಲಿಡಿಯಾ, ಸೈಮಂಡ್, ಆನಂದ, ಪ್ರಸಾದ್, ಸ್ಟ್ಯಾನ್ಲಿ ವರದರಾಜ ಸೇರಿದಂತೆ ಇತರರು ಇದ್ದರು.