ಪ್ರಮುಖ ಸುದ್ದಿ

ಮಹಿಳೆಯರ ಜೊತೆ ಅನುಚಿತ ವರ್ತನೆಃ HD ರೇವಣ್ಣ ಬಂಧನಕ್ಕೆ ಆಗ್ರಹ

ಎಚ್.ಡಿ.ರೇವಣ್ಣ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಎಚ್.ಡಿ.ರೇವಣ್ಣ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಮಹಿಳೆಯರ ಜೊತೆ ಅನುಚಿತ ವರ್ತನೆಃ ರೇವಣ್ಣ ಬಂಧನಕ್ಕೆ ಆಗ್ರಹ

yadgiri, ಶಹಾಪುರಃ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಅನುಚಿತವಾಗಿ ವರ್ತಿಸಿದ ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ಮಹಿಳೆಯರನ್ನು ಅಪಮಾನಿಸಿದ್ದು ಈ ಕೂಡಲೇ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಅಂಗನವಾಡಿ ನೌಕರರ ಸಂಘ ಮತ್ತು ಸಿಐಟಿಯುವತಿಯಿಂದ ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಜುಲೈ 13 ರಂದು ಹೊಳೆನರಸಿಪುರ ಪಟ್ಟಣದ ಸಿಡಿಪಿಓ ಕಚೇರಿ ಎದುರು ಹಲವಾರು ಬೇಡಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ.ರೇವಣ್ಣ ಮಹಿಳೆಯರು ಎನ್ನುವದನ್ನು ಮರೆತು ಅನುಚಿತವಾಗಿ ಸಭ್ಯವಾಗಿ ಮಾತನಾಡಿರುವದು ಸರಿಯಲ್ಲ. ಈ ಕೂಡಲೇ ಗೃಹ ಸಚಿವರು ಪೊಲೀಸ್ ಅಧಿಕಾರಿಗಳ ಮಧ್ಯ ಪ್ರವೇಶಿಸಲು ಸೂಚಿಸಬೇಕು. ಮಹಿಳೆಯರನ್ನು ಅವಮಾನಿಸಿರುವ ಕುರಿತು ಕಾನೂನು ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಅಂಗನವಾಡಿ ನೌಕರರ ರಾಜ್ಯ ಕಾರ್ಯದರ್ಶಿ ಸುನಂದಾ ಎಚ್. ಮಾತನಾಡಿ, ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತಿದ್ದ ಹೋರಾಟ ನಿರತ ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖರಿಗೆ ಶಾಸಕ ರೇವಣ್ಣ ದುರ್ವರ್ತೆನೆಯಿಂದ ವರ್ತಿಸಿರುವದು ನಮ್ಮ ಹಕ್ಕುಗಳ ದಮನಕ್ಕೆ ಯತ್ನಿಸಿರುವದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ನಿರತ ಮಹಿಳೆಯರಿಗೆ ನೀವು ಯಾರ ಮಾತು ಕೇಳಿ ಪ್ರತಿಭಟಿಸುತ್ತಿದ್ದೀರಿ.? ನನಗೆಲ್ಲ ಗೊತ್ತಿದೆ. ನಿಮಗೇನು ಮಾಡಬೇಕೆಂಬುದು ನನಗೆ ಗೊತ್ತಿದೆ ಎಂದು ಬೆದರಿಕೆಯೊಡ್ಡಿದ ಶಾಸಕರ ವರ್ತನೆ ಸರಿಯಲ್ಲ. ಇದು ಶಾಸಕರೊಬ್ಬರಿಗೆ ಗೌರವ ತರುವದಲ್ಲ. ಈ ಕುರಿತು ಕೂಡಲೇ ಪೊಲೀಸರು ಶಾಸಕ ರೇವಣ್ಣ ವಿರುದ್ದ ದೂರು ದಾಖಲಿಸಿಕೊಂಡು ಬಂಧಿಸಬೇಕೆಂದು ಒತ್ತಾಯಿಸಿದರು.

ಕೇಂದ್ರದಲ್ಲಿ ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಿಸದೆ ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೀರೇನು.? ಗ್ರಾಮಸ್ಥರಿಂದ ದೂರು ಕೊಡಿಸಿ ನಿಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಲ್ಲಿ ಆಗ ಬುದ್ಧಿ ಕಲಿಯುತ್ತೀರಿ ಎಂದು ಗರಂ ಆದ ಘಟನೆ ನಡೆದಿದ್ದು, ಇದು ಅಮಾನವೀಯ ನಡೆಯಾಗಿದ್ದು, ಮುಂಬರುವ ದಿನಗಳಲ್ಲಿ ಅಲ್ಲಿನ ಕಾರ್ಯಕರ್ತೆಯರಿಗೆ ಏನೆ ಸಮಸ್ಯೆಯಾದರೂ ಅದಕ್ಕೆ ರೇವಣ್ಣನವರೇ ಕಾರಣೀಭೂತರಾಗಲಿದ್ದಾರೆ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯಧ್ಯಕ್ಷೆ ಶಾಂತಾ ಘಂಟೆ, ಸಂಘದ ಪ್ರಮುಖರಾದ ಸುರೇಖಾ ಕುಲಕರ್ಣಿ, ಬಸಲಿಂಗಮ್ಮ ನಾಟೇಕಾರ, ಯಮುನಮ್ಮ ದೋರನಹಳ್ಳಿ, ಇಂದಿರಾದೇವಿ ಕೊಂಕಲ್, ಬಸಮ್ಮ ಆಲ್ದಾಳ, ರಾಧಾಬಾಯಿ, ನಸೀಮಾ, ಸುನಂದ ಹಿರೇಮಠ, ಮಂಜುಳಾ ಹೊಸಮನಿ, ಮರಲಿಂಗಪ್ಪ ಮಕಾಸಿ, ಧೂಲಾಸಾಬ, ಹನುಮಂತ, ಅಶೋಕ, ಸಿದ್ಧರಾಮ, ಬಸವರಾಜ ಭಜಂತ್ರಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button