ಪ್ರಮುಖ ಸುದ್ದಿ

ಮಾರ್ಚ್ 19 ರಂದು ದೋರನಹಳ್ಳಿ ಮತ್ತು ದೇವತ್ಕಲ್ ಗ್ರಾಮಕ್ಕೆ ಮುಖ್ಯಂಮತ್ರಿ

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಭೇಟಿ ಕಾರ್ಯಕ್ರಮ ಪೂರ್ವಸಿದ್ದತೆ ಪರಿಶೀಲನೆ

ಮಾರ್ಚ್ 19 ರಂದು ಮುಖ್ಯಂಮತ್ರಿ ದೋರನಹಳ್ಳಿ ಮತ್ತು ದೇವತ್ಕಲ್ ಗ್ರಾಮಕ್ಕೆ ಭೇಟಿ ಹಿನ್ನಲೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಭೇಟಿ ಕಾರ್ಯಕ್ರಮ ಪೂರ್ವಸಿದ್ದತೆ ಪರಿಶೀಲನೆ

ಯಾದಗಿರಿ: ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಎಂಬ ಘೋಷ ವಾಕ್ಯದಡಿ ಆಯೋಜಿಸಿರುವ ” ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ‘ ಕಾರ್ಯಕ್ರಮದ ನಿಮಿತ್ತ ಮಾರ್ಚ್ 19 ರಂದು ಮುಖ್ಯಮಂತ್ರಿಯವರು ಸುರಪುರ ತಾಲೂಕಿನ ದೇವತ್ಕಲ್ ಗ್ರಾಮಕ್ಕೆ ಮತ್ತು ಕಳೆದ ಕೆಲವು ದಿನಗಳ ಹಿಂದೆ ಸಿಲಿಂಡರ್ ಸ್ಪೋಟ ಘಟನೆ ನಡೆದ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮಕ್ಕೆ ಭೇಟಿ ನೀಡುವುದರ ಪ್ರಯುಕ್ತ ಇಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಕಾರ್ಯಕ್ರಮದ ಪೂರ್ವ ಸಿದ್ದತೆ ತಯಾರಿಯನ್ನು ಪರಿಶೀಲನೆ ನಡೆಸಿದರು.

ಮುಖ್ಯಮಂತ್ರಿಯವರು ಬಂದಿಳಿಯುವ ದೇವತ್ಕಲ್ ಮತ್ತು ದೋರನಹಳ್ಳಿಯಲ್ಲಿ ಸಿದ್ದಗೊಳ್ಳುತ್ತಿರುವ ಹೆಲಿಪ್ಯಾಡ್ ನ್ನು ಜಿಲ್ಲಾಧಿಕಾರಿ ಪರಿಶೀಲಿಸಿ ಮತ್ತು ವಾಹನಗಳ ಪಾಕಿರ್ಂಗ್ ಸ್ಥಳವನ್ನು ವೀಕ್ಷಿಸಿದರು

ಸಿದ್ದಗೊಳ್ಳುತ್ತಿರುವ ವೇದಿಕೆ ಸಮಿತಿ, ಆಹಾರ ಸಮಿತಿ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ಅಡಿಗಲ್ಲು ಸಮಿತಿ, ಸಾಂಸ್ಕøತಿಕ ಕಾರ್ಯಕ್ರಮ ಸಮಿತಿ, ಪರಿಕರ ಆದೇಶಗಳ ವಿತರಣಾ ಸಮಿತಿ, ಹೆಲಿಪ್ಯಾಡ್ ಸಮಿತಿ, ವಸತಿ ಗೃಹ ಮತ್ತು ವಸತಿ ವ್ಯವಸ್ಥೆ ಸಮಿತಿ, ಆಮಂತ್ರಣ ಪತ್ರಿಕೆ ಪ್ರಿಂಟ್ ಮತ್ತು ಹಂಚಿಕೆ ಸಮಿತಿ, ಕಾನೂನು ಸುವ್ಯವಸ್ಥೆ ಸಮಿತಿ, ಸ್ವಚ್ಛತಾ ನೈರ್ಮಲ್ಯ ಸಮಿತಿ, ಮಾಧ್ಯಮ ನಿರ್ವಹಣಾ ಸಮಿತಿ, ಆರೋಗ್ಯ ಸಮಿತಿ, ಮಳಿಗೆಗಳು ಮತ್ತು ಪ್ರದರ್ಶನ ಸಮಿತಿ, ಸಾರ್ವಜನಿಕ ಅರ್ಜಿ ಸ್ವೀಕಾರ ಸಮಿತಿ, ವಾಹನ ನಿರ್ವಹಣಾ ಸಮಿತಿಯ ಕಾರ್ಯಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುರಪುರ ಶಾಸಕ ರಾಜುಗೌಡ ( ನರಸಿಂಹ ನಾಯಕ), ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಶಹಾಪುರ ತಹಶೀಲ್ದಾರ ಮಧುರಾಜ್, ಸುರಪುರ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಹುಣಸಗಿ ತಹಶೀಲ್ದಾರ ಅಶೋಕ ಸುರಪುರಕರ್, ಗ್ರೇಡ್- 2 ತಹಶೀಲ್ದಾರ ಮಹಾದೇವಗೌಡ ಬಿರಾದರ್ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button