ಪ್ರಮುಖ ಸುದ್ದಿ
ಡಿಸಿಎಂ ನೇಮಕ : ಯಡಿಯೂರಪ್ಪ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳ ಸ್ಥಾನವೆಷ್ಟು!
ನವದೆಹಲಿ : ನಾಳೆ ಬೆಳಗ್ಗೆ 10ಗಂಟೆ ಒಳಗೆ ರಾಜ್ಯಪಾಲರಿಗೆ ಪಟ್ಟಿ ನೀಡಿ ನೂತನ ಸಚಿವರ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇದೇ ವೇಳೆ ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗುವುದು. ಆದರೆ, ಎಷ್ಟು ಜನ ಉಪ ಮುಖ್ಯಮಂತ್ರಿಗಳು ಹಾಗೂ ಯಾರೆಲ್ಲಾ ಉಪ ಮುಖ್ಯಮಂತ್ರಿಗಳಾಗಲಿದ್ದಾರೆ ಎಂಬುದನ್ನು ನಾಳೆ ತಿಳಿಸುವೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆ ಮೂಲಕ ಯಡಿಯೂರಪ್ಪ ಏಕಮೇವ ಚಕ್ರಾಧಿಪತ್ಯಕ್ಕೆ ಕಡಿವಾಣ ಹಾಕುವ ಹೈಕಮಾಂಡ್ ಪ್ಲಾನ್ ಫಲಿಸಿದೆ. ಯಡಿಯೂರಪ್ಪ ಕೇಂದ್ರಿವಾಗಿರುವ ರಾಜ್ಯ ಬಿಜೆಪಿಯಲ್ಲಿ ಶಕ್ತಿ ಕೇಂದ್ರಗಳನ್ನು ಹುಟ್ಟು ಹಾಕುವ ಮೂಲಕ ಯಡಯೂರಪ್ಪ ಶಕ್ತಿ ಕುಂದಿಸುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಸ್ಕೆಚ್ ಸಕ್ಸಸ್ ಆಗಿದೆ ಎನ್ನಲಾಗಿದೆ. ಆದರೆ, ಬಿಜೆಪಿ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ರಾಜ್ಯ ರಾಜಕೀಯ ವಿಶ್ಲೇಷಕರು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.