ಪ್ರಮುಖ ಸುದ್ದಿ
ದೇವೇಗೌಡರ ಸತ್ಯ ನನಗೂ ಗೊತ್ತಿದೆ -ಸಿಎಂ ಸಿದ್ಧರಾಮಯ್ಯ ವಾಗ್ಬಾಣ
ಕೊಪ್ಪಳ: ಜೆಡಿಎಸ್ ಪಕ್ಷದಿಂದ ನಿನ್ನೆಯಷ್ಟೇ ದಲಿತ ಸಮಾವೇಶ ಮಾಡಲಾಗಿದೆ. ಮಾಜಿ ಸಿಎಂ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದಲಿತ ನಾಯಕನನ್ನು ಉಪ ಮುಖ್ಯಮಂತ್ರಿ ಮಾಡ್ತೇವೆ ಅಂದಿದ್ದಾರೆ. ಆದ್ರೆ, ನಾನು ದೇವೇಗೌಡರ ಜೊತೆಗೆ ರಾಜಕೀಯ ಮಾಡಿದವನು. ಅದನ್ನು ದೇವೇಗೌಡರು ಮರೆತಿದ್ದಾರೆ. ನನಗೂ ದೇವೇಗೌಡರ ಸತ್ಯ ಗೊತ್ತಿದೆ ಎಂದು ಸಿಎಂ ಸಿದ್ಧರಾಮಯ್ಯ ಅವರು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ದಲಿತರ ಬಗ್ಗೆ ಕಾಳಜಿ ಇದ್ದರೆ ಮುಖ್ಯಮಂತ್ರಿಯನ್ನಾಗಿ ಘೋಷಿಸಲಿ. ಆದರೆ, ದೇವೇಗೌಡರು ನನ್ನ ಕೊನೆ ಆಸೆಯೇ ಮಗ ಮುಖ್ಯಮಂತ್ರಿ ಆಗಬೇಕೆಂಬುದು ಎನ್ನುತ್ತಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದ್ದಾರೆ.