ಪ್ರಮುಖ ಸುದ್ದಿ
ಪತ್ನಿಯ ಪೂಜಾಫಲದಿಂದ ಸಿಎಂ ಆಗಿದ್ದಾರಂತೆ ಸಿದ್ಧರಾಮಯ್ಯ!
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಅಂತ ಒಂದು ಅರ್ಥಪೂರ್ಣ ಗಾದೆ ಇದೆ. ಅಂತ ಗಾದೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಸಾಲ ಮಾಡಿ ಮದುವೆ ಆಗಬಾರದು. ಸಾಮೂಹಿಕ ವಿವಾಹಗಳಲ್ಲಿ ಸರಳ ಮದುವೆ ಆಗುವುದು ಒಳಿತು. ಮದುವೆ ಆದ ಬಳಿಕ ಸಂಸಾರ ಚನ್ನಾಗಿರಬೇಕು. ನಾವೆಲ್ಲಾ ಶಾಸಕ, ಮಂತ್ರಿ ಆಗಬೇಕಂದರೆ ಪತ್ನಿಯ ಸಹಕಾರ ಅತಿ ಮುಖ್ಯ ಎಂದು ಸಿಎಂ ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ನವ ವಧುವರರಿಗೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆಗಬೇಕಾದ್ರೂ ಸಹ ನನ್ನ ಪತ್ನಿಯ ಸಹಕಾರ ತುಂಬಾ ಇದೆ. ನಾನು ಹೆಚ್ಚಾಗಿ ದೇಗುಲಗಳಿಗೆ ಹೋಗಲ್ಲ. ಆದ್ರೆ, ನನ್ನ ಪತ್ನಿ ಪ್ರತಿದಿನ ದೇವರಿಗೆ ಪೂಜೆ ಮಾಡ್ತಾರೆ. ಹೀಗಾಗಿ, ನನ್ನ ಪೂಜಾ ಫಲದಿಂದಲೇ ನೀವು ಮುಖ್ಯಮಂತ್ರಿ ಆಗಿರೋದು ಅಂತ ನನ್ನ ಪತ್ನಿ ಹೇಳುತ್ತಾಳೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.