ಏಪ್ರೀಲ್ 5 ರಾತ್ರಿ, 9 ಗಂಟೆಗೆ, 9 ನಿಮಿಷ ಏನ್ ಮಾಡಬೇಕು ಗೊತ್ತಾ.? ಪ್ರಧಾನಿ ಸಂದೇಶ ಓದಿ
ನರೇಂದ್ರ ಮೋದಿಜೀ ನೀಡಿದ ಇಂದಿನ ಸಂದೇಶ
ವಿವಿಡೆಸ್ಕ್ಃ ನನ್ನ ದೇಶದ ಪ್ರೀತಿಯ ನಿವಾಸಿಗರೆಲ್ಲರಿಗೂ ನಮಸ್ಕಾರ. ಕಳೆದ 9 ದಿನದಿಂದ ದೇಶದ ಕೋಟ್ಯಂತರ ಜನರು ಮನೆಯಲ್ಲಿಯೇ ಇದ್ದು ಕೊರೊನಾ ತಡೆಗೆ ಸಹಕರಿಸುತ್ತಿದ್ದಾರೆ. ವೈದ್ಯರು, ಪೊಲಿಸರು, ಕಾರ್ಮಿಕರೂ ಸೇವೆಯಲ್ಲಿದ್ದಾರೆ.
ಇವರೆಲ್ಲರಿಗು ಜನತಾ ಕರ್ಫ್ಯೂ ಸಂದರ್ಭ ಗಂಟೆ, ತಟ್ಟೆ ಮತ್ತು ಚಪ್ಪಾಳೆ ಬಾರಿಸುವ ಮೂಲಕ ಅವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಲಾಗಿತ್ತು ಎಂದು ಮೊದಲು ಏಪ್ರೀಲ್ 5 ರಂದು ರವಿವಾರ ರಾತ್ರಿ 9 ಗಂಟೆಗೆ ಮೋಂಬತ್ತಿ, ಟಾರ್ಚ್, ದಿಯಾ ಇಲ್ಲಾ ಮೊಬೈಲ್ ಕಿ ಫ್ಲ್ಯಾಶ್ ಲೈಟ್ ಬೆಳಗಿಸಬೇಕು. ಪ್ರಕಾಶದ ಶಕ್ತಿ ಜಾಗೃತಿ ಮಾಡಬೇಕಿದೆ.
ಇದು ನಾನು ಒಬ್ಬನೇ ಅಲ್ಲ ನಾವು 130 ಕೋಟಿ ಜನರಿದ್ದೇವೆ ಜೊತೆಗಿದ್ದೇವೆ ಎಂದು ತೋರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದರು.
ಎಲ್ಲರೂ ಅಂದು ರಾತ್ರಿ ಸಂಕಲ್ಪ ಮಾಡಿ ರಾಮಾಯಣ, ಮಹಾಭಾರತದ ಧ್ಯಾನ ಮಾಡಿ. ಇದೆಲ್ಲ ಕೊರೊನಾ ತಡೆಗೆ ನಮಗೆಲ್ಲ ಉತ್ಸಾಹ ನೀಡಲಿದೆ. ಅಂದು ಒಗ್ಗಟ್ಟಿನ ಶಕ್ತಿ, ಕೊರೊನಾ ಸಂಕಟದ ಕತ್ತಲು ಹೋಗಿ ಬೆಳಕಿನ ಶಕ್ತಿ ಪ್ರಜ್ವಲಿಸಲಿ ಎಂದು ದೇಶದ ಜನತೆಗೆ ವಿಡಿಯೋ ಸಂದೇಶ ನೀಡಿದರು.
ಅಂಧಕಾರಕ್ಕೆ ಪ್ರಕಾಶದ ಮೂಲಕ ಶಕ್ತಿಯನ್ನು ತೋರಿಸಬೇಕು. ಒಗ್ಗಟ್ಟಾಗಿ ಹೋರಾಡಬೇಕಿದೆ. ಆದರೆ ಸಾಮಾಜಿಕ ಅಂತರ ಬಹು ಮುಖ್ಯವಿದೆ. ಅದುವೇ ಕೊರೊನಾ ತಡೆಗೆ ರಾಮಬಾಣ. ಹಾಗಾಗಿ ಎಲ್ಲರೂ ಅಂದು ಮನೆ ಮುಂದೆ ಅಥವಾ ಬಾಲ್ಕನಿಯಲ್ಲಿ ನಿಂತು ದೀಪ, ಮೊಬೈಲ್ ಫ್ಲ್ಯಾಶ್ ಹಚ್ಷುವ ಮೂಲಕ ಮಹಾ ಶಕ್ತಿಯನ್ನು ಜಾಗೃತಗೊಳಿಸಬೇಕು.
ಮುಖ್ಯವಾಗಿ ಇಡಿ ಮನೆಯ ಎಲ್ಲಾ ಲೈಟ್ ಗಳನ್ನು ಬಂದ್ ಮಾಡಿರಬೇಕು. 9 ಗಂಟೆಗೆ 9 ನಿಮಿಷಗಳವರೆಗೆ ದೀಪ ಬೆಳಗಬೇಕು. ಆ ಸಮಯದಲ್ಲಿ ಕೊರೊನಾ ತಡೆಗೆ ಪ್ರಾರ್ಥನೆ, ಧ್ಯಾನ ಮಾಡಿ ಎಂದು ತಿಳಿಸಿದರು.