ಪ್ರಮುಖ ಸುದ್ದಿ
ಕೊರೊನಾ ನಿಯಮ ಮೀರಿ ವರ್ತನೆ ಲಾಕ್ ಡೌನ್ ತೂಗುಕತ್ತಿ..! ಸಿಎಂ ಸೂಚನೆ
ಕೊರೊನಾ ನಿಯಮ ಮೀರಿ ವರ್ತನೆ ಲಾಕ್ ಡೌನ್ ತೂಗುಕತ್ತಿ..! ಸಿಎಂ ಸೂಚನೆ
ಬೆಂಗಳೂರಃ ಕೊರೊನಾ ತಡೆಗೆ ಜಾರಿ ಮಾಡಿದ ಕೊರೊನಾ ನಿಯಮಗಳನ್ನು ನಿರ್ಲಕ್ಷಿಸಿದಲ್ಲಿ ಲಾಕ್ ಡೌನ್ ಅನಿವಾರ್ಯ ಈ ಕುರಿತು ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಜನ ಎಚ್ಚೆತ್ತುಕೊಳ್ಳದಿದ್ದರೆ, ಕೋವಿಡ್ ನಿಯಮಗಳನ್ನು ಪಾಲನೆ ಮಾಡದೆ ಬೇಕಾಬಿಟ್ಟಿ ಸಂಚರಿಸುತ್ತಿದ್ದು, ಸಂತೆ, ಮಾರ್ಕೇಟ್ ನಲ್ಲಿ ಜನವೋ ಜನ ಸೇರುತ್ತಿದ್ದು,ಇದು ಜನರೇ ಕುಳಿತು ಮಹಾಮಾರಿಯನ್ನ ಆಹ್ವಾನಿಸಿದಂತೆ.
ಈಗಲೂ ಜನ ಕೋವಿಡ್ ನಿಯಮ ಉಲ್ಲಂಘಿಸಿದರೆ ತಕ್ಷಣದಿಂದಲೇ ಲಾಕ್ ಡೌನ್ ಜಾರಿ ಘೋಷಣೆ ಮಾಡುವ ಅಧಿಕಾರವನ್ನು ಕೊರೊನಾ ನಿಯಂತ್ರಣ ಟೀಂಗೆ ಸಿಎಂ ವಹಿಸಿದ್ದಾರೆ ಎನ್ನಲಾಗಿದೆ.
ಇಂದಿನಿಂದ ಮತ್ತಷ್ಟು ಟಫ್ ರೂಲ್ಸ್ ಜಾರಿಗೊಳಿಸುವ ಕೋವಿಡ್ ನಿಯಂತ್ರಣ ತಂಡ ಅದಕ್ಕೂ ಜನ ಜಗ್ಹದೇ ಹೋದಲ್ಲಿ ಲಾಕ್ ಡೌನ್ ಘೋಷಿಸುವ ಸಾಧ್ಯತೆ ಇದೆ.