ಚೀನಾದಲ್ಲಿ ಹೆಚ್ಚಾದ ಕೋವಿಡ್ಃ ಮತ್ತೆ ಲಾಕ್ ಡೌನ್ ಹೇರಿಕೆ
ಬೀಜಿಂಗ್ ನಗರ ಪ್ರದೇಶದಡಿ ತೀವ್ರತೆ ಪಡೆದ ಕೋವಿಡ್
ಚೀನಾದಲ್ಲಿ ಹೆಚ್ಚಾದ ಕೋವಿಡ್ಃ ಮತ್ತೆ ಲಾಕ್ ಡೌನ್
ಚೀನಾಃ ಕೋವಿಡ್ ತವರೂರಾದ ಚೀನಾದಲ್ಲಿ ಮತ್ತೆ ಓಮಿಕ್ರಾನ್ ಆರ್ಭಟ ಶುರುವಾಗಿದೆ. ಒಮಿಕ್ರಾನ್ ಒಬ್ಬರಿಂದ ಒಬ್ಬರಿಗೆ ತೀವ್ರವಾಗಿ ಹರಡುತ್ತಿದ್ದು, ಅಲ್ಲಿನ ಶಾಂಘೈ ನಗರದಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಅಲ್ಲದೆ ಚೀನಾದ ಉತ್ತರ ನಗರದ ನೇಲೆ ಲಾಕ್ ಡೌನ್ ಕ್ರಮ ಜಾರಿಯಾಗಿದೆ.
ಸುಮಾರು 90 ಲಕ್ಷ ಜನ ವಾಸಿಸುವ ಈ ಪ್ರದೇಶದಲ್ಲಿ ಲಾಕ್ ಡೌನ್ ಹೇರಲಾಗಿದೆ. ಮಾರ್ಚ್ 10 ರಂದು ಚೀನಾದಲ್ಲಿ 528 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ದಿನೆದಿನೇ ಹೆಚ್ಚಾಗುತ್ತಿರುವದರಿಂದ ಈಗಲೇ ಅದನ್ನು ತಡೆಯುವ ಕೆಲಸಕ್ಕೆ ಚೀನಾ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ಹೀಗಾಗಿ ಕೋವಿಡ್ ಟೆಸ್ಟಿಂಗ್ ಮಾಡಿಸಲು ಜನ ಹಾತೊರೆಯುತ್ತಿದ್ದು, ಅಲ್ಲಿನ ಆರೋಗ್ಯ ಇಲಾಖೆಯು ಕೋವಿಡ್ ಪರೀಕ್ಷೆ ಕಿಟ್ ಹೆಚ್ಚು ಬಳಕೆಗೆ ಅವಕಾಶ ಕಲ್ಪಿಸಿದೆ. ಯಾರಾದರೂ ಕಿಟ್ ಪಡೆದು ಟೆಸ್ಟ್ ಮಾಡಿಸಿಕೊಳ್ಳಬಹುದು. ಅಲ್ಲದೆ ಮಕ್ಕಳಿಗೂ ಲಸಿಕೆ ಹಾಕುವಲ್ಲಿ ಚೀನಾ ಹೆಚ್ಚೆಚ್ಚು ಕ್ರಮಕ್ಕೆ ಮುಂದಾಗಿದೆ. ಕೋವಿಡ್ ಆರಂಭದಲ್ಲೇ ಅದನ್ನು ತಡೆಯುವ ಎಲ್ಲಾ ಕ್ರಮಕ್ಕೂ ಚೀನಾ ಮುಂದಾಗಿದೆ.