ಟ್ರಾನ್ಸ್ಪೋರ್ಟ್ ಲಾರಿಗೆ ಡಿಕ್ಕಿ ಹೊಡೆದ ಕ್ರೇನ್ಃ ತಪ್ಪಿದ ಭಾರಿ ಅನಾಹುತ
ಕ್ರೇನ್ ಡಿಕ್ಕಿ ನೆಲಕ್ಕುರುಳಿದ ಲಾರಿಃ ಅದೃಷ್ಟವಶಾತ್ ಚಾಲಕ ಪಾರು

ಟ್ರಾನ್ಸ್ಪೋರ್ಟ್ ಲಾರಿಗೆ ಡಿಕ್ಕಿ ಹೊಡೆದ ಕ್ರೇನ್ಃ ತಪ್ಪಿದ ಭಾರಿ ಅನಾಹುತ
ಕ್ರೇನ್ ಡಿಕ್ಕಿ ನೆಲಕ್ಕುರುಳಿದ ಲಾರಿಃ ಅದೃಷ್ಟವಶಾತ್ ಚಾಲಕ ಪಾರು
Yadgiri, ಶಹಾಪುರಃ ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದ ಎದುರುಗಡೆ ಹೆದ್ದಾರಿ ಮೇಲೆ ದೇವಿ ನಗರದೊಳಗಡೆಯಿಂದ ಹೆದ್ದಾರಿ ಕ್ರಾಸ್ ಮಾಡುತ್ತಿರುವ ಲಾರಿಯೊಂದಕ್ಕೆ ವೇಗವಾಗಿ ಹೊರಟಿದ್ದ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಲಾರಿ ಹೆದ್ದಾರಿ ಮೇಲೆಯೇ ಅಡ್ಡಲಾಗಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಉಂಟಾಗಿರುವದಿಲ್ಲ. ವಾಹನ ಸಂಚಾರ ದಟ್ಭಾಗಿರುವಾಗಲೇ ಈ ಘಟನೆ ನಡೆದಿದ್ದು, ಪುಣ್ಯಕ್ಕೆ ಅನಾಹುತ ತಪ್ಪಿದಂತಾಗಿದೆ.
ಆದರೆ ಕೆಲಹೊತ್ತು ಪ್ರಯಾಣಿಕರಿಗೆ ಅಡೆತಡೆ ಉಂಟಾಗಿದ್ದು, ಸುದ್ದಿ ತಿಳಿದ ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೆದ್ದಾರಿ ಮೇಲೆ ಪಲ್ಟಿ ಹೊಡೆದಿದ್ದ ಲಾರಿಯನ್ನು ಅದೇ ಕ್ರೇನ್ ಮೂಲಕ ಮೇಲೆತ್ತಿಸಿ ರಸ್ತೆ ಬದಿಗೆ ನಿಲ್ಲಿಸುವ ಮೂಲಕ ವಾಹನಗಳ ಸಂಚಾರ ಸುಗಮಗೊಳಿಸಿದರು.
ನಂತರ ಲಾರಿ ಚಾಲಕ ಹಾಗೂ ಕ್ರೇನ್ ಚಾಲಕರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಕುಡಿದಿರುವ ಬಗ್ಗೆ ಪರಿಶೀಲನೆ ನಡೆಸಲಾಗಿ, ಕ್ರೇನ್ ಚಾಲಕ ಎಣ್ಣೆ ಹೊಡೆದಿದ್ದಾನೆ ಎಂಬುದು ಪೊಲೀಸ್ ಮೂಲಗಳು ತಿಳಿಸಿವೆ.
ಕ್ರೇನ್ ಚಾಲಕನಿಗೆ ಧರ್ಮದೇಟು
ಕ್ರೇನ್ ಚಾಲಕ ವೇಗವಾಗಿ ಹೊರಟಿದ್ದರಿಂದಲೇ ಘಟನೆ ಸಂಭವಿಸಲು ಕಾರಣವಾಗಿದೆ. ಪ್ರತ್ಯಕ್ಷದರ್ಶಿಗಳು ಕ್ರೇನ್ ಚಾಲಕನಿಗೆ ಧರ್ಮದೇಟು ನೀಡಿದ ಸಂಗತಿಯು ನಡೆದಿದೆ. ಪೊಲೀಸರು ಘಟನೆ ಕುರಿತು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವದಾಗಿ ತಿಳಿಸಿದ್ದಾರೆ.
ಲಾರಿ ಕಲ್ಬುರ್ಗಿಯದ್ದಾಗಿದ್ದು, ಟ್ರಾನ್ಸ್ಪೋರ್ಟ್ ಕಾರ್ಯ ಮಾಡುತ್ತದೆ. ಕ್ರೇನ್ ಕೊಪ್ಪಳ ಮೂಲದವರದ್ದಾಗಿದೆ ಎನ್ನಲಾಗಿದೆ. ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನೆಲಕ್ಕುರುಳಿದ್ದು, ಲಾರಿ ಪಾಟಕ್ ಮತ್ತು ಕ್ಯಾಬಿನ್ ಪಾಟಕ್ ಸೇರಿದಂತೆ ಇತರಡೆ ನುಜ್ಜುಗುಜ್ಜಾಗಿದೆ. ಲಾರ ಚಾಲಕನಿಗೆ ಕಾಲಿಗೆ ಒಂದಿಷ್ಟು ಪೆಟ್ಟಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಪ್ರಾಣ ಉಳಿದಿರುವದೇ ಅದೃಷ್ಟ.
ಅಲ್ಲದೆ ಲಾರಿ ಉರುಳುವಾಗಿ ಯಾವುದೇ ಬೈಕ್ ಸವಾರರು ಇತರೆ ವಾಹನಗಳು ಸಮೀಪಿಸದಿರುವದು ಉತ್ತಮವಾಗಿದೆ ಇಲ್ಲವಾದಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇತ್ತು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
—————–