ಪ್ರಮುಖ ಸುದ್ದಿ
ಕಾಶ್ಮೀರದಲ್ಲಿ ಕ್ರಿಕೇಟಿಗ ಎಂ.ಎಸ್.ಧೋನಿ ಸೇನಾ ಕರ್ತವ್ಯ ನಿರ್ವಹಣೆ!
ಜಮ್ಮು-ಕಾಶ್ಮೀರ್ : ಖ್ಯಾತ ಕ್ರಿಕೆಟಿಗ, ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ 15ದಿನಗಳ ಕಾಳ ಜಮ್ಮು ಕಾಶ್ಮೀರದಲ್ಲಿ ಸೇನಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಲೆಪ್ಟಿನೆಂಟ್ ಕರ್ನಲ್ ಗೌರವ ಹೊಂದಿರುವ ಧೋನಿ ಕ್ರಿಕೆಟ್ ನಿಂದ ಎರಡು ತಿಂಗಳ ಕಾಲ ವಿರಾಮ ಪಡೆದಿದ್ದಾರೆ. ಜುಲೈ 31ರಿಂದ ಆಗಷ್ಟ್ 15ರವರೆಗೆ ಕಾಲಾಳುಪಡೆ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸಲಿದ್ದಾರೆ.
2011ರಲ್ಲಿ ಭಾರತೀಯ ಸೇನೆಯಿಂದ ಲೆಫ್ಟಿನೆಂಟ್ ಕರ್ನಲ್ ಗೌರವ ಪಡೆದಿದ್ದ ದೋನಿ ಪ್ರಾದೇಶಿಕ ಸೈನ್ಯದ 106 ಕಾಲಾಳುಪಡೆ ಬೆಟಾಲಿಯನ್ ಸೇರಿದ್ದಾರೆ. ಈ ಹಿಂದೆ ಧೋನಿ ಆಗ್ರಾ ತರಬೇತಿ ಶಿಬಿರದಲ್ಲಿ ಭಾರತೀಯ ವಾಯುಪಡೆ ವಿಮಾನಗಳಿಂದ ಪ್ಯಾರಾಚ್ಯೂಟ್ ಟ್ರೇನಿಂಗ್ ಜಂಪ್ಸ್ ಪಡೆದಿದ್ದರು.