ಪ್ರಮುಖ ಸುದ್ದಿ
ಮರಳು ದಂಧೆಗೆ ಗ್ರಾಮ ಲೆಕ್ಕಾಧಿಕಾರಿ ಬಲಿ
ಅಕ್ರಮ ಮರಳು ದಂಧೆ- ಅಧಿಕಾರಿ ಮೇಲೆ ಟಿಪ್ಪರ್ ಹರಿಸಿ ಕೊಲೆ.!
ರಾಯಚೂರು: ಶನಿವಾರ ಸಂಜೆ ಅಕ್ರಮ ಮರಳುಗಾರಿಕೆಯನ್ನ ತಡೆಯಲು ಮುಂದಾದ ಗ್ರಾಮ ಲೆಕ್ಕಾಧಿಕಾರಿ ಮೇಲೆ ಮರಳು ದಂಧೆಕೋರರು ಟಿಪ್ಪರ್ ಹರಿಸಿದ ಘಟನೆ ಮಾನ್ವಿ ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ನಡೆದಿದೆ.
ಚಿಕಲಪರ್ವಿ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ (45)ಎಂಬ ಅಧಿಕಾರಿಯೇ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ ಎನ್ನಲಾಗಿದೆ.
ತುಂಗಭದ್ರಾ ನದಿಯಿಂದ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಆರೋಪ ಕೇಳಿ ಬಂದಿದ್ದರಿಂದ ಸಾಹೇಬ ಪಟೇಲ್ ಅವರು ಬುದ್ದಿನ್ನಿ ಗ್ರಾಮದಲ್ಲಿ ರಾಯಲ್ಟಿ ತಪಾಸಣೆಗೆ ಹೋಗಿದ್ದರು.
ಆ ವೇಳೆ ಲಾರಿ ಚಾಲಕ, ಸಾಹೇಬ್ ಪಟೇಲ್ರ ಕಾಲುಗಳ ಮೇಲೆ ಲಾರಿ ಹರಿಸಿದ್ದರು. ಬಳಿಕ ಅಲ್ಲೇ ಟಿಪ್ಪರ್ ಬಿಟ್ಟು ಮರಳು ದಂಧೆಕೋರರು ಪರಾರಿಯಾಗಿದ್ದರು.
ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ರಿಮ್ಸ್ ಆಸ್ಪತ್ರೆಯಲ್ಲಿ ರಾತ್ರಿ ಸಾವನ್ನಪ್ಪಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.