ಗೋಗಿ (ಕೆ) ಗ್ರಾಮದಲ್ಲಿ ಓರ್ವನ ಬರ್ಬರ ಹತ್ಯೆ
ಗೋಗಿ (ಕೆ) ಗ್ರಾಮದಲ್ಲಿ ಓರ್ವನ ಬರ್ಬರ ಹತ್ಯೆ
yadgiri, ಶಹಾಪುರಃ ತಾಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಬುಧವಾರ ಬೆಳಗಿನಜಾವ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜರುಗಿದೆ.
ಖಾಸಿಂಸಾಬ ತಂದೆ ಚಂದಾಸಾಬ್ ಚೌದ್ರಿ (53) ಎಂಬಾತನೇ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹತ್ಯೆಗೀಡಾದ ಖಾಸಿಂಸಾಬ ಬಕ್ರೀದ್ ಹಬ್ಬದಂಗವಾಗಿ ಸಡಗರ ಸಂಭ್ರಮದೊಂದಿಗೆ ಬೆಳಗ್ಗೆ ನಾಲ್ಕುವರೆ ಗಂಟೆ ನಮಾಜ್ ಮಾಡಲು ಮಸೀದಿಗೆ ತೆರಳುತ್ತಿರುವ ಸಂದರ್ಭದಲ್ಲಿ ಮನೆಯ ಹತ್ತಿರರ ಮುಖ್ಯ ರಸ್ತೆ ಬದಿ ಖಾಲಿ ನಿವೇಶನದಲ್ಲಿ ಕೊಚ್ಚಿ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತ ಖಾಸಿಂಸಾಬ ಮಟನ್ ಶಾಪ್ ನಡೆಸುತ್ತಿದ್ದ ಎನ್ನಲಾಗಿದೆ. ಹತ್ಯೆಗೈದ ದುಷ್ಕರ್ಮಿಗಳು ಯಾರೆಂದು ತಿಳಿದು ಬಂದಿಲ್ಲ. ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಶ್ವಾನದಳದೊಂದಿಗೆ ಆಗಮಿಸಿದ್ದ ಪೊಲೀಸರು ತನಿಖೆ ನಡೆಸಿದರು. ಶ್ವಾನ ಮೃತ ಖಾಸಿಂಸಾಬ ಮನೆ ಸುತ್ತಮುತ್ತಲೂ ಮತ್ತು ಇತರಡೆ ಶೋಧ ಕಾರ್ಯ ನಡೆಸಲಾಯಿತು. ದುಷ್ಕರ್ಮಿಗಳ ಬೆನ್ನು ಹತ್ತಿದ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದೆ. ಈ ಸಂದರ್ಭದಲ್ಲ ಗ್ರಾಮೀಣ ಸಿಪಿಐ ಶ್ರೀನಿವಾಸ ಅಲ್ಲಾಪುರೆ, ಪಿಎಸ್‍ಐ ಸಂತೋಷ ರಾಠೋಡ ಇತರರಿದ್ದರು. ಗೋಗಿ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದೆ.