ಶಹಾಪುರಃ ಬೈಕ್ ಕಳ್ಳರ ಬಂಧನಃ 9 ಬೈಕ್ ವಶಕ್ಕೆ
ಶಹಾಪುರಃ ಬೈಕ್ ಕಳ್ಳರ ಬಂಧನಃ 9 ಬೈಕ್ ವಶಕ್ಕೆ
yadgiri, ಶಹಾಪುರಃ ಸಂಶಯಾಸ್ಪದವಾಗಿ ಎರಡು ಬೈಕ್‍ಗಳೊಂದಿಗೆ ನಗರದ ಮೂವರು ನಗರದ ಅಗ್ನಿಶಾಮಕ ದಳದ ಕಚೇರಿ ಹತ್ತಿರ ಬೆಳಗಿನಜಾವ ನಿಂತಿದ್ದು, ಪೊಲೀಸರು ಗಮನಿಸಿ ಇವರನ್ನು ಹಿಡಿದು ವಿಚಾರಣೆ ನಡೆಸಲಾಗಿ ಸುಮಾರು 9 ಬೈಕ್ ಕಳ್ಳತನ ಮಾಡಿರುವದು ತಿಳಿದು ಬಂದಿದೆ.
ಮೂವರು ಬೈಕ್ ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು, ಇವರಿಂದ ನಗರದಲ್ಲಿ ಕಳ್ಳತನ ಮಾಡಲಾದ 9 ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಮೌಲ್ಯ ಅಂದಾಜು 3,79,000-00 ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲಪ್ಪ ಕಟ್ಟಿಮನಿ ಸಾ.ಹಳಿಸಗರ(22), ಅನೀಲ ಚಿನ್ನರಾಠೋಡ ಸಾಚಾಮನಾಳ ತಾಂಡ(24) ಮತ್ತು ಇನ್ನೋರ್ವ ಸುನೀಲ್ ಚಿನ್ನರಾಠೋಡ ಚಾಮನಾಳ ತಾಂಡ(20) ನಿವಾಸಿಯಾಗಿದ್ದು ಮೊದಲನೇ ಆರೋಪಿ ಪೇಂಟಿಂಗ್ ಕೆಲಸ ಮಾಡಿದರೆ, ಅನೀಲ್ ಮತ್ತು ಸುನೀಲ್ ಚಾಮನಾಳದಲ್ಲಿ ಚೈನೀಸ್ ಫುಡ್ ಅಂಗಡಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮತ್ತು ಡಿವೈಎಸ್ಪಿ ವೆಂಕಟೇಶ ಮಾರ್ಗದರ್ಶನದಲ್ಲಿ ಪಿಐ ಚನ್ನಯ್ಯ ಹಿರೇಮಠ ನೇತೃತ್ವದ ಪೊಲೀಸರ ತಂಡ ಬೈಕ್ ಕಳ್ಳರನ್ನು ಹಿಡಿಯಲು ತಂಡ ರಚನೆ ಮಾಡಲಾಗಿತ್ತು. ತಂಡ ಕಾರ್ಯಾಚರಣೆಯಂತೆ ಸೋಮವಾರ ಬೆಳಗಿನ ಜಾವ 5 ಗಂಟೆಗೆ ಸಂಶಯಸ್ಪಾದವಾಗಿ ಎರಡು ಪಲ್ಸರ್ ಬೈಕ್ ತೆರಳುತ್ತಿರುವಾಗ ಪೊಲೀಸರ ತಂಡ ಇವರನ್ನು ಅಡ್ಡಗಟ್ಟಿ ಹಿಡಿದ ಪರಿಣಾಮ ವಿಚಾರಣೆ ನಡೆಸಲಾಗಿ 9 ಬಃಐಕ್ ಕಳ್ಳತನ ಮಾಡಿರುವದು ಹೊರ ಬಿದ್ದಿದೆ.
ಮೂವರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಿಐ ಚನ್ನಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಾಚಾರಣೆ ತಂಡದಲ್ಲಿ ಪಿಎಸ್‍ಐ ಚಂದ್ರಕಾಂತ ಮೆಕಾಲೆ, ಹೆಡ್ ಕಾನ್ಸಟೇಬಲ್ಗಳಾದ ನಾರಾಯಣ, ಬಾಬು, ಶರಣಪ್ಪ ಸೇರಿದಂತೆ ಕಾನ್ಸಟೇಬಲ್‍ಗಳಾದ ಲಕ್ಕಪ್ಪ, ಗೋಕುಲ್ ಹುಸೇನ್, ಭಾಗಣ್ಣ, ಸಿದ್ರಾಮಯ್ಯ ಇತರರಿದ್ದರು. ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಎಸ್‍ಪಿ ಅವರು ಶ್ಲಾಘಿಸಿದ್ದಾರೆ.