ಧ್ಯಾನದಿಂದ ಕೊರೊನಾ ಗೆದ್ದ 105 ವರ್ಷದ ಅಜ್ಜಿ..!
ಮಹಾಮಾರಿ ಕೊರೊನಾ ಗೆದ್ದ ಮೋಹನಮ್ಮ
ಹೈದ್ರಾಬಾದ್ಃ ಮಹಾಮಾರಿ ಕೊರೊನಾ ಶಕ್ತಿ ಹೀನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ 105 ವರ್ಷದ ಅಜ್ಜಿಯೊಬ್ಬಳಿಗೆ ಕೊರೊನಾ ಸೋಂಕು ದೃಢವಾಗಿ ಆಸ್ಪತ್ರೆಗೆ ದಾಖಲಾದ ವೇಳೆ ವೃದ್ಧೆ ನಿತ್ಯ ಡಯಟ್ ಮತ್ತು ಧ್ಯಾನದಿಂದ ಕೊರೊನಾವನ್ನು ಓಡಿಸಿ ವಿಜಯಿಯಾದ ಘಟನೆ ಕರ್ನೂಲ್ನಲ್ಲಿ ನಡೆದಿದೆ.
ಬಿ.ಮೋಹನಮ್ಮ ಎಂಬ ಅಜ್ಜಿಯೇ ಕೊರೊನಾ ಗೆದ್ದಿದ್ದು, ಆಕೆಯ ಧ್ಯಾನದಿಂದಲೇ ಕೊರೊನಾವನ್ನು ಓಡಿಸಿದ್ದಾಳೆ ಎನ್ನಲಾಗಿದೆ. ಕರ್ನೂಲ್ ನಲ್ಲಿರುವ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ವೃದ್ಧೆಯನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಣ್ಣು ಹಣ್ಣಾದ ವೃದ್ಧೆ ಕೊರೊನಾ ಜಯಸುವದು ಕಷ್ಟಕರ ಎಂದು ಮಾತನಾಡಿಕೊಳ್ಳುವಾಗಲೇ ವೃದ್ಧೆ ಕೊರೊನಾವನ್ನು ಒಡ್ಡು ಬಂದಿದ್ದಾಳೆ, ಆಕೆಯ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಎಲ್ಲರನ್ನು ನೀರಿಕ್ಷೆಯನ್ನು ಮೀರಿಸಿದೆ,
ಅಜ್ಜಿ ಇದೇನ್ ಚಮತ್ಕಾರ ಎಂದ್ರೆ, ನಿತ್ಯ ವಾಕಿಂಗ್, ಯೋಗ, ಧ್ಯಾನ ಎಲ್ಲದಕ್ಕೂ ಮುಖ್ಯವಾಗಿ ಆತ್ಮವಿಶ್ವಾಸ ಜೊತೆಗೆ ಔಷಧಿ ಮತ್ತು ಸಮತೋಲಿತ ಆಹಾರದ ಸೇವನೆ ಮೂಲಕ ಕೊರೊನಾ ಗೆದ್ದಿದ್ದೇನೆ ಎಂದು ಅಜ್ಜಿ ಖುಷಿಯಿಂದಲೇ ಹೇಳುತ್ತಾಳೆ.