CRPF ಅಡುಗೆ ಕೆಲಸಗಾರರಿಗೆ ಪದೋನ್ನತಿ: ಇತಿಹಾಸದಲ್ಲಿಯೇ ಮೊದಲು
ಹೊಸದಿಲ್ಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ 85 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಡುಗೆಯವರು, ನೀರು ಸಾಗಣೆ ಕೆಲಸ ಮಾಡುವವರಿಗೆ ಬಡ್ತಿ ನೀಡಲಾಗಿದೆ. 12,250 ಮಂದಿ ಅಡುಗೆಯವರು, ನೀರು ಸಾಗಣೆ ಮಾಡುವವರು ಸಿಆರ್‌ಪಿಎಫ್ನಲ್ಲಿ ಇದ್ದಾರೆ. ಈ ಪೈಕಿ 1700 ಮಂದಿ ಬಾಣಸಿಗರು, 900 ಮಂದಿ ನೀರು ಸಾಗಣೆ ಮಾಡುವವರಿಗೆ ಕಾನ್‌ಸ್ಟೇಬಲ್ ಹುದ್ದೆಯಿಂದ ಹೆಡ್‌ಕಾನ್‌ಸ್ಟೇಬಲ್ ಆಗಿ ಬಡ್ತಿ ನೀಡಲಾಗಿದೆ. 1983ರಿಂದ 2004ರ ನಡುವೆ ನೇಮಕಗೊಂಡವರಿಗೆ ಈ ಸವಲತ್ತು ದೊರೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1935ರಲ್ಲಿ ಸ್ಥಾಪನೆಯಾಗಿದ್ದ ಸಿಆರ್‌ಪಿಎಫ್ನಲ್ಲಿ ಅಡುಗೆಯವರು, ನೀರು ಸಾಗಣೆ ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಿದ್ದವರಿಗೆ 2016ರಲ್ಲಿ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗಿದ್ದ ವೇಳೆ ಮಾನ್ಯತೆ ನೀಡಲಾ ಗಿತ್ತು. 30-35 ವರ್ಷ ಸಿಆರ್‌ಪಿಎಫ್ನಲ್ಲಿ ಅಡುಗೆ ಮತ್ತು ನೀರು ಸಾಗಣೆ ಕೆಲಸ ಮಾಡುವ ಹುದ್ದೆಯಲ್ಲಿದ್ದವರು ಬಡ್ತಿ ಪಡೆಯದೆ ನಿವೃತ್ತರಾದ ಉದಾಹರ ಣೆಗಳೇ ಹೆಚ್ಚಿದ್ದವು. 1 ಬೆಟಾಲಿಯನ್‌ನಲ್ಲಿ 45 ಮಂದಿ ನೀರು ಹೊರುವವರು, ಅಡುಗೆಯವವರು ಇರುತ್ತಾರೆ.