ಮೇಕೆದಾಟು ವಿಚಾರಃ ನಾನು ಭಾರತದ ಪರ ಎಂದ ಸಿಟಿ ರವಿ
ಮೇಕೆದಾಟು ವಿಚಾರಃ ನಾನು ಭಾರತದ ಪರ ಎಂದ ಸಿಟಿ ರವಿ
ಬೆಂಗಳೂರಃ ಮೇಕೆದಾಟು ವಿಚಾರದಲ್ಲಿ ನಾನು ಭಾರತದ ಪರವಾಗಿ ಮಾತನಾಡುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ಕುರಿತು ವಾಸ್ತವಿಕವಾಗಿ ಯೋಚಿಸಬೇಕು. ಆ ಕುರಿತು ಯೋಜನೆ ರೂಪಿತಗೊಂಡಿರುವದು ಭಾರತಕ್ಕೆ ಅನುಕೂಲವಾಗುವಂತೆ ಹೊರತು ಯಾವುದೋ ಒಂದು ರಾಜ್ಯಕ್ಕೆ ಅನುಕೂಲ ಇನ್ನೊಂದು ರಾಜ್ಯಕ್ಕೆ ಬಲಿ ಕೊಡುವ ವಿಚಾರ ಇರುವದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಯೋಜನೆ ಅನುಷ್ಠಾನದಿಂದ ತಮಿಳುನಾಡಿಗೆ ಏನಾಗಲಿದೆ ಕರ್ನಾಟಕಕ್ಕೆ ಯಾವ ಲಾಭವಾಗಲಿದೆ ಎಂಬ ಕುರಿತು ತಮಿಳುನಾಡಿನಲ್ಲಿಯೇ ತಿಳಿಸಿದ್ದೇನೆ. ಇಲ್ಲಿಯು ಹೇಳುತ್ತೇನೆ.
ಮೇಕೆದಾಟು ಯೋಜನೆಯಿಂದ ಯಾವುದೇ ಪರ ವಿರೋಧ ಮಾತಾಡುವ ಅಗತ್ಯವಿಲ್ಲ. ಯೋಜನೆಯನ್ನು ದರ್ಬಳಕೆ ಮಾಡಬಾರದು. ಇದರಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ಸೌಹಾರ್ದ ರಾಜಕೀಯ ಮಾಡುತ್ತದೆ. ಎರಡು ರಾಜ್ಯಗಳ ನಡುವೆ ಸಂಘರ್ಷ ಬೇಡ. ಮೇಕೆದಾಟು ಯೋಜನೆ ಭಾರತದ ಪರವಾಗಿದೆ ಎಂಬುದು ಎಲ್ಲರೂ ಅರಿಯಬೇಕು ಎಂದಿದ್ದಾರೆ.