ಪ್ರಮುಖ ಸುದ್ದಿ
ಬಿಎಸ್ವೈ ಜೊತೆ ಊರುಗೋಲಾಗಿರುವೆ-ಎಚ್.ಡಿ.ರೇವಣ್ಣ
ಹಾಸನಃ ನೆರೆ ಪರಿಹಾರ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿರುವ ವರದಿ ತಿರಸ್ಕಾರ ವಿಚಾರವಾಗಿ ತುಂಬಾ ಜಾಣ್ಮೆಯಿಂದ ವರದಿ ತಿರಸ್ಕರಿಸಲಾಗಿದೆ. ಕೇಂದ್ರ ಸರ್ಕಾರದಲ್ಲಿ ದುಡ್ಡಿಲ್ಲವೋ ಅಥವಾ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆಯೋ ಯಾವ ಕಾರಣಕ್ಕೆ ತಿರಸ್ಕಾರ ಮಾಡಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾಧ್ಯಮಕ್ಕೆ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಕೇಂದ್ರ ಸರ್ಕಾರದ ಬೊಕ್ಕಸವು ಖಾಲಿಯಾಗಿದೆ ಎಂದು ಟೀಕಿಸಿದರು.
ಅಲ್ಲದೆ ಸಿಎಂ ಬಿಎಸ್ವೈ ಅವರಿಗೆ ಒಳ್ಳೆಯದಾಗಲಿ. ಅವರ ಜೊತೆಗೆ ಊರುಗೋಲಾಗಿ ನಾವೆಲ್ಲ ಇರಲಿದ್ದೇವೆ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.