ಗಂಡಸಾಗಿದ್ದರೆ ಇಂದ್ರಜೀತ್ ಆಡಿಯೋ ರಿಲೀಸ್ ಮಾಡಲಿ – ನಟ ದರ್ಶನ್
ದೊಡ್ಮನೆ ಈ ವಿಷಯಕ್ಕೆ ಸಂಬಂಧವಿಲ್ಲ, ನಾನು ದೊಡ್ಮನೆ ಬ್ಯಾನರ್ ಹೆಸರಲ್ಲೇ ಅನ್ನ ತಿಂದಿದ್ದೇನೆ – ದರ್ಶನ್
ಬೆಂಗಳೂರಃ ಗಲಾಟೆ ಕುರಿತು ನಾನು ಮಾತಾಡಿರುವ ಆಡಿಯೋ ಇದೆ ಎಂದು ಇಂದ್ರಜೀತ್ ಹೇಳುತ್ತಿದ್ದಾರೆ. ಗಂಡಸಾಗಿದ್ರೆ ಮೊದಲು ಆಡಿಯೋ ರಿಲೀಸ್ ಮಾಡ್ಲಿ. ಅದರಲ್ಲಿ ನನ್ನದೇನಾದ್ರೂ ತಪ್ಪಿದ್ರೆ ಕಾನೂನು ಕ್ರಮ ಕೈಗೊಳ್ಳಲಿ ಜೈಲಿಗೆ ಬೇಕಾದ್ರೆ ಹೋಗ್ತೇನೆ ಎಂದು ನಟ ದರ್ಶನ್ ಇಂದ್ರಜೀತ್ ವಿರುದ್ಧ ಕೆಂಡಾಮಂಡಲವಾದರು.
ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು, ಇಲ್ಲಿವರೆಗೂ ನಾನು ಸುಮ್ಮನಿದ್ದೆ, ಸುಖಾಸುಮ್ಮನೆ ದೊಡ್ಮನೆ ಹೆಸರು ಉಮಾಪತಿ ನಡುವೆ ಎಳೆದು ತಂದಿದ್ದು, ದೊಡ್ಮನೆ ಈ ವಿಷಯಕ್ಕೆ ಯಾವುದೇ ಸಂಬಂಧವಿಲ್ಲ.
ಬೇಕಿದ್ರೆ ಇಂದ್ರಜೀತ್ ಸಿನಿಮಾ ನಿರ್ದೇಶನ ಮಾಡ್ತಾರ ಮಾಡಲಿ ಮಾಡೋಣ ಅದು ಬಿಟ್ಟು ವಯಕ್ತಿಕ ವಿಷಯ ಕ್ಯಾತೆ ತೆಗೆಯುವದು ಸರಿಯಲ್ಲ ಎಂದ ಅವರು, ಇಂದ್ರಜೀತ್ ಹಿಂದೆ ಡ್ರಗ್ಸ್ ವಿಷಯ ಕುರಿತು ಮಾತನಾಡಿದ್ರು, ಅದೇನಾಯ್ತು. ಪ್ರಚಾರ ಬೇಕಿದ್ರೆ ಸಾಕಷ್ಡು ವಿಷಯಗಳಿವೆ.
ವಯಕ್ತಿಕ ವಿಷಯ ಕೆದುಕುವದಲ್ಲ. ನಾನು ಸಲುಗೆಯಿಂದಲೇ ವ್ಹೇಟರ್ ಗೆ ಹೊಡೆದೆ, ಊಟ ತರುವದಕ್ಕೆ ತಡವಾದರೆ ಯಾರು ಪ್ರಶ್ನೆ ಮಾಡುವದಿಲ್ಲವೇ.? ಅದೇ ರೀತಿ ಪ್ರಶ್ನೆ ಮಾಡಿದೆ ಅಷ್ಟೆ. ಅಲ್ಲದೆ ಉಮಾಪತಿ ವಿಷಯವನ್ನು ಡೈವರ್ಟ್ ಮಾಡ್ತಿದ್ದಾರೆ. ಮಹಿಳೆ ವಂಚನೆ ಪ್ರಕರಣ ಏನಾಯಿತು.? ಅದು ಬಿಟ್ಟು ಬೇರೆ ವಿಷಯ ಎಳೆದು ತರುವದು ಸರಿಯಲ್ಲ ಎಂದಿದ್ದಾರೆ.