ಪ್ರಮುಖ ಸುದ್ದಿ

ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ಚಿರಋಣಿ-ದರ್ಶನಾಪುರ

ಯಾದಗಿರಿಃಶಹಾಪುರ ತಾಲೂಕಿನ ಕಾರ್ಯಕರ್ತರು, ಅಭಿಮಾನಿಗಳು ನೀಡುತ್ತಿರುವ ಅಂತ:ಕರಣದ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ನಿಮ್ಮ ಅಭಿಮಾನ, ಮಮತೆ ಹಾಗೂ ಸನ್ಮಾನ ನನಗೆ ಮತ್ತಷ್ಟು ಜವಬ್ದಾರಿಯನ್ನು ಹೆಚ್ಚಿಸಿದೆ ಎಂದು ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಹೊರವಲಯದಲ್ಲಿರುವ ಚಾಂದ ಪ್ಯಾಲೇಸ್‍ನಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು, ಅಭಿಮಾನ ಬಳಗ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರ 57ನೇ ಹುಟ್ಟುಹಬ್ಬ ಮತ್ತು ಇಬ್ರಾಹಿಂ ಶಿರವಾಳ ಅವರು ಕಾಂಗ್ರೆಸ್ ಸೇರ್ಪಡೆ ನಿಮಿತ್ತ ಆಯೋಜಿಸಿದ್ದ ಅಭಿನಂದನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ದೇಶದ ಹಾಗೂ ರಾಜ್ಯದ ಶೈಕ್ಷಣಿಕ, ಆರ್ಥಿಕ, ವೈಜ್ಞಾನಿಕ, ಕೃಷಿ, ನೀರಾವರಿ, ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಪ್ರಾಮಾಣಿಕತೆ ಮತ್ತು ಬದ್ದತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ನಮ್ಮ ಪಕ್ಷದ ಉನ್ನತ ದ್ಯೇಯೋದ್ದೇಶಗಳನ್ನು ಹಾಗೂ ಸಾಧನೆಗಳನ್ನು ಮೆಚ್ಚಿಕೊಂಡು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಇಬ್ರಾಹಿಂ ಶಿರವಾಳ ಅವರಿಗೆ ಅಭಿನಂದನೆ ಸಲ್ಲಿಸಿದರು. ಮುಖಂಡರಾದ ಲಾಲಹ್ಮದ ಬಾಂಬೆಶೇಠ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲ್ಕಲ್, ಸೈಯದ ನಜೀರ್ ಇತರರು ಮಾತನಾಡಿದರು.

ವೇದಿಕೆ ಮೇಲೆ ಮುಖಂಡರಾದ ಮಹ್ಮದ ಇಬ್ರಾಹಿಂ ಶಿರವಾಳ, ಶ್ರೀನಿವಾಸರೆಡ್ಡಿ ಕಂದಕೂರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಲಿಂ ಸಂಗ್ರಾಮ, ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಪಾಟೀಲ್, ಜಿಪಂ ಸದಸ್ಯ ವಿನೋದ ಪಾಟೀಲ್, ಮುಖಂಡರಾದ ನಾಗಪ್ಪ ಕಾಶಿರಾಜ, ಮಲ್ಲಿಕಾರ್ಜುನ ಪೂಜಾರಿ, ಹಣಮಂತ ಹಳಿಸಗರ, ಶಿವಮಾನಪ್ಪ ಚಂದಾಪೂರ, ನೀಲಕಂಠ ಬಡಿಗೇರ, ರುದ್ರಪ್ಪ ಹುಲಿಮನಿ, ರಾಯಪ್ಪ ಸಾಲಿಮನಿ, ಹಣಮಂತ್ರಾಯ ದಳಪತಿ, ನಿಂಗಣ್ಣ ನಾಯ್ಕೋಡಿ, ಸೋಫಿಸಾಹೇಬ, ಅಜೀಮ್ ಜಹಾಗಿರದಾರ, ಶಿವಶರಣ ನಾಗಲೋಟ ಇತರರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button