ಜೆಡಿಎಸ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ದರ್ಶನಾಪುರ ಕಾರ್ಯಕ್ಷಮತೆ ಮೆಚ್ಚಿ ಪಕ್ಷಕ್ಕೆ ಸೇರ್ಪಡೆ-ಯಳವಾರ
ಶಹಾಪುರಃ ತಾಲೂಕಿನ ಶಿರವಾಳ ಗ್ರಾಮ ವಾಲ್ಮೀಕಿ ಸಮಾಜದ ಮುಖಂಡ ದೇವಣ್ಣ ಯಳವಾರ ಮತ್ತು ಗ್ರಾಪಂ ಮಾಜಿ ಅಧ್ಯಕ್ಷ ಹೂಜಿ ನಾಯಕ ಪೂಜಾರಿ ನೇತೃತ್ವದಲ್ಲಿ ಬುಧವಾರ ಗಣೇಶ ನಗರದಲ್ಲಿರುವ ಶಾಸಕ ದರ್ಶನಾಪುರ ಅವರ ಗೃಹ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದರ್ಶನಾಪುರ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾವುದೇ ನಿರ್ದಿಷ್ಟ ಲಾಭ ವ್ಯಕ್ತಪಡಿಸದೆ ಮನಪೂರ್ವಕವಾಗಿ ಕಾಂಗ್ರೆಸ್ ಪಕ್ಷಕ್ಕೆ ದೇವಣ್ಣ ಯಳವಾರ ಮತ್ತು ಹೂಜಿನಾಯಕ ಅವರ ನೇತೃತ್ವದಲ್ಲಿ ಹಲವಾರು ಜನ ಕಾಂಗ್ರೆಸ್ ಸೇರ್ಪಡೆಯಾದರು.
ಸರಳ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜ ನೀಡುವ ಮೂಲಕ ಅವರನ್ನು ಬರಮಾಡಿಕೊಳ್ಳಲಾಯಿತು. ಬರುವ ಗ್ರಾಮ ಪಂಚಾಯತ್ ಚುನಾವಣೆಯಾಗಲಿ, ಅಥವಾ ಎಂಎಲ್ಸಿ ಚುನಾವಣೆಯಾಗಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಪಕ್ಷದ ಏಳ್ಗೆಗಾಗಿ ದುಡಿದವರಿಗೆ ತಕ್ಕ ಪ್ರತಿಫಲವಿದೆ ಎಂದು ತಿಳಿಸಿದರು.
ಮುಖಂಡ ಶರಣಪ್ಪ ಸಲಾದಪುರ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುರೇಂದ್ರ ಪಾಟೀಳ್ ಮಡ್ನಾಳ, ನೀಲಕಂಠ ಬಡಿಗೇರ, ಮುಸ್ತಫಾ ದರ್ಬಾನ್, ಬಸವರಾಜ ಹೇರುಂಡಿ, ಶಿವಮಹಾಂತ ಚಂದಾಪುರ, ವಸಂತಕುಮಾರ ಸುರಪುರಕರ್, ರಾಯಪ್ಪ ಸಾಲಿಮನಿ, ಶಾಂತಪ್ಪ ಕಟ್ಟಿಮನಿ ಯುವ ಮುಖಂಡರಾದ ಅಜೀಮ್ ಜಮಾದಾರ, ರಾಮು ತಹಸೀಲ್, ಮಂಜುನಾಥ ಚಟ್ಟಿ ಇತರರಿದ್ದರು.
ಶಾಸಕ ದರ್ಶನಾಪುರ ಅವರ ಅಭಿವೃದ್ಧಿ ಕಾರ್ಯಗಳು, ಅವರ ಕಾರ್ಯ ಕ್ಷಮತೆ, ಅವರಿಗಿರುವ ಕಾಳಜಿ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ಯಾವುದೇ ಸಮುದಾಯ, ಧಮ ಎನ್ನದೆ ಎಲ್ಲ ಜಾತಿ ಸಮುದಾಯಗಳು ಒಂದೇ ಎನ್ನುವ ಮನೋಭಾವನೆಯಿಂದ ರಾಜಕೀಯ ಮಾಡುವ ನಾಯಕರ ನಡೆ ನುಡಿ ಮೆಚ್ಚಿ ನಾನು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ವಾಪಸ್ ಮರಳಿದ್ದೇನೆ.
-ದೇವಪ್ಪ ಯಳವಾರ. ವಾಲ್ಮೀಕಿ ಸಮಾಜದ ಮುಖಂಡ.