ವಿನಯ ವಿಶೇಷ

ಜೈಹೋ ಇಸ್ರೋ : ಭಾರತೀಯ ಬಾಹ್ಯಾಕಾಶ ಸಂಸ್ಥೆಯಿಂದ ‘ಜಿಸ್ಯಾಟ್-6A’ ಯಶಸ್ವಿ ಉಡಾವಣೆ

-ವಿನಯ ಮುದನೂರ್

ದೆಹಲಿ: ಭಾರತಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ISRO) ಪ್ರಬಲ ‘ಎಸ್-ಬ್ಯಾಂಡ್ ಸಂವಹನ ಉಪಗ್ರಹ ಜಿಸ್ಯಾಟ್ -6A’ಯನ್ನು  ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ-ಎಫ್08) ಮೂಲಕ ಗುರುವಾರ ಯಶಸ್ವಿ ಉಡಾವಣೆ ನಡೆಸಿದೆ.

ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್(SLP)ಯಿಂದ  ಜಿಸ್ಯಾಟ್-6A ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‍ವಿ-ಎಫ್-08 ರಾಕೆಟ್ ಸಂಜೆ 4:56ಕ್ಕೆ ಉಡಾವಣೆ ಮಾಡಲಾಯಿತು. ಸುಮಾರು 17 ನಿಮಿಷಗಳ ಕಾಲ 3 ಹಂತಗಳಲ್ಲಿ ರಾಕೆಟ್ ಉಡಾವಣೆ ಕಾರ್ಯ ನಡೆಯಿತು. ಕೊನೆಗೂ ಜಿಸ್ಯಾಟ್-6A ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

ಜಿಸ್ಯಾಟ್-6A ಉಪಗ್ರಹವನ್ನು ಹೊತ್ತ GSLV-F08 ರಾಕೆಟ್ ಸುಮಾರು 415.6 ಟನ್‌ ತೂಕವಿದೆ. 161ಅಡಿ ಎತ್ತರವಿದೆ. ಈ ರಾಕೆಟ್ ಗೆ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಲಾಗಿದೆ. ಈ ಹಿಂದೆ ಪ್ರಯೋಗಿಸಿದ ರಾಕೆಟ್ ಗಳಿಗಿಂತಲೂ ಇಂಧನ ದಕ್ಷತೆ ಉತ್ತಮವಾಗಿದೆ ಎನ್ನಲಾಗಿದೆ.

ಜಿಸ್ಯಾಟ್-6A ಉಪಗ್ರಹವನ್ನು ಭೂಮಿಯಿಂದ ಸುಮಾರು 36,000ಕಿ.ಮೀ. ದೂರದಲ್ಲಿರುವ ಕಕ್ಷೆಗೆ ರವಾನೆ ಮಾಡಲಾಗಿದೆ. 10 ವರ್ಷಗಳ ಕಾಲ ಈ ಉಪಗ್ರಹ ಕಾರ್ಯನಿರ್ವಹಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಜನವರಿ 2018ರಲ್ಲಿ ಕೆ.ಶಿವನ್ ಅವರು ಇಸ್ರೋ ಮುಖ್ಯಸ್ಥರಾಗಿ ನೇಮಕವಾದ ಬಳಿಕ ನಡೆದ ಮೊದಲ ಉಡಾವಣೆಯ ಉಪಗ್ರಹ ಇದಾಗಿದ್ದು ಯಶಸ್ವಿಯಾಗಿದ್ದು ವಿಜ್ಞಾನಿಗಳಿಗೆ ಆನೆಬಲ ತಂದಿದೆ.

Related Articles

Leave a Reply

Your email address will not be published. Required fields are marked *

Back to top button