ಪ್ರಮುಖ ಸುದ್ದಿ
ಶ್ರೀಅಯ್ಯಪ್ಪ ಸ್ವಾಮಿ ದರ್ಶನ ಪಡೆದ ದರ್ಶನಾಪುರ
ನಾಡಿನಲ್ಲಿ ಶಾಂತಿ, ಸಮೃದ್ಧಿ ಕಲ್ಪಿಸಲಿ - ದರ್ಶನಾಪುರ ಪ್ರಾರ್ಥನೆ
ಶ್ರೀಅಯ್ಯಪ್ಪ ಸ್ವಾಮಿ ದರ್ಶನ ಪಡೆದ ದರ್ಶನಾಪುರ
ನಾಡಿನಲ್ಲಿ ಶಾಂತಿ, ಸಮೃದ್ಧಿ ಕಲ್ಪಿಸಲಿ – ದರ್ಶನಾಪುರ ಪ್ರಾರ್ಥನೆ
ಶಬರಿಮಲೈಃ ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಹಾಲಿ ಶಾಸಕರು, ಮಾಜಿ ಸಚಿವರು ಆದ ಶರಣಬಸಪ್ಪಗೌಡ ದರ್ಶನಾಪುರ ಅವರು ಶಬರಿಮಲೈ ಶ್ರೀಅಯ್ಯಪ್ಪ ಸ್ವಾಮಿ ದರ್ಶನ ಪಡೆಸು ಪುನೀತ ಭಾವನೆ ವ್ಯಕ್ತಪಡಿಸಿದರು.
ಸದ್ಯ ಮೂರ್ನಾಲ್ಕು ದಿನದಿಂದ ಶಬರಿಮಲೈ ಪ್ರವಾಸದಲ್ಲಿದ್ದ ಅವರು, ನಿನ್ನೆ ಬೆಳಗ್ಗೆ 12 ಗಂಟೆ ತಮ್ಮ ಆಪ್ತರೊಂದಿಗೆ ವಿಶೇಷ ಮಂಗಳಾರತಿ ವೇಳೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರುನಾಡಿಗೆ ಶ್ರೀದೇವರು ಸಾಮರಸ್ಯ, ಶಾಂತಿ, ಸಮೃದ್ಧಿ ಕಲ್ಪಿಸಲಿ, ನಾಡಿನ ಸಮಸ್ತ ಜನತೆಗೆ ಒಳಿತನ್ನೆ ಮಾಡಲಿ, ದೇಶ ರಕ್ಷಕರಿಗೂ ಮತ್ತು ಅನ್ನ ನೀಡುವ ರೈತರಿಗೂ, ಸದಾ ದುಡಿಯುವ ಕಾರ್ಮಿಕರಿಗೂ ಆಯುರಾರೋಗ್ಯ ಕರುಣಿಸಲಿ. ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಈ ವೇಳೆ ವಿಜಯಕುಮಾರ ಹೊನ್ಕಲ್, ಗುರು ಮಣಿಕಂಠ, ಶರಣು ಇಟಗಿ ಇತರರಿದ್ದರು.