ಪ್ರಕೃತಿಯಿಂದ ದೇವರ ಸೃಷ್ಠಿ, ನಾನು ದೇವರನ್ನು ನಂಬುವೆ-ಭೈರಪ್ಪ
ದಸರಾ ಸಂಭ್ರಮಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ ಚಾಲನೆ
ಮೈಸೂರಃ ಕೆಲವರು ವಿಚಾರ ವಾದಿಗಳಿಗೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ಬಿಂಬಿಸಲಾಗಿದೆ. ಆದರೆ ನಾನು ದೇವರನ್ನು ನಂಬುವೆ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ತಿಳಿಸಿದರು.
ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ 2019ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇರಳದಲ್ಲಿ ಕಮ್ಯುನಿಸ್ಡ್ ಪಕ್ಷ ಕೆಲ ಮಹಿಳೆಯರನ್ನು ಅಯ್ಯಪ್ಪ ಸ್ವಾಮಿ ದೇಗುಲ್ಲಕೆ ನುಗ್ಗಿಸಿತು. ಅದರಲ್ಲಿ ಮುಸ್ಲಿಂ ಮಹಿಳೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ಮಾಡಿ ಬಂದಳು. ಆ ಮುಸ್ಲಿಂ ಮಹಿಳೆಯನ್ನು ಅವರ ಸಮಾಜ ಬಹಿಷ್ಕರಿಸಿತು.
ನಂತರ ಆಕೆ ಬಲವಂತ ಮಾಡಿದ್ದಕ್ಕೆ ಹೋದೆ ಕ್ಷಮೆ ಕೇಳುತ್ತೇನೆ ಎಂದು ಅವರ ಸಮಾಜದ ಮುಂದೆ ಬೇಡಿಕೊಂಡ ಘಟನೆಯು ನಡೆಯಿತು.
ನಮ್ಮಲ್ಲಿ ಕೆಲವು ತಪ್ಪು ಗ್ರಹಿಕೆಗಳಿವೆ. ಹಿಂದೂ ದೇವಾಲಯಗಳ ನಂಬಿಕೆ ಬೇರೆ ಇದೆ. ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬಾರದು.
ಕಾಯಕನಿಷ್ಠೆ ಹಾಳು ಮಾಡಿದ್ದು ರಾಜಕಾರಣಿಗಳು ಕೃಷಿ ಸಹ ಹಾಳುಗೆಡುವಿದ್ದಾರೆ.
ಒಬ್ಬ ರೈತ ಸೂರ್ಯ ಹುಟ್ಟುವ ಮುಂಚೆ ಎತ್ತುಗಳನ್ನು ಕಟ್ಟುತ್ತಾನೆ. ಆದರೆ ರಾಜಕಾರಣಿಗಳು ಎಲ್ಲಾ ಸರ್ಕಾರಿ ಸಿಬ್ಬಂದಿಗಳು 10 ಗಂಟೆಗೆ ಕೆಲಸಕ್ಕೆ ಹೋಗುತ್ತಾರೆ ನೀನೇಕೆ ಬೆಳ್ಳಂಬೆಳಗ್ಗೆ ಹೋಗುವೆ ನೀನು ಕೃಷಿ ಕೆಲಸಕ್ಕೆ 10 ಗಂಟೆಗೆ ಹೋಗು ಎಂದೇಳುವ ಮೂಲಕ ಕಾಯಕ ನಿಷ್ಟೆ ಕೃಷಿ ಕಾಯಕ ಹಾಳು ಮಾಡಿದ್ದಾರೆ.
ಬಿಸಲಾದ ನೇಲೆ ಎತ್ತುಗಳನ್ನು ಹೊಡೆದುಕೊಂಡು ಕರಷಿ ಕಾರ್ಯಚಟುವಟಿಕೆ ಮಾಡಲಾಗಲ್ಲ. ಎತ್ತುಗಳಿಗೆ ಆಯಾಸವಾಗಲಿದೆ ಎಂಬುದನ್ನು ತಿಳಿಯದವರು ಆಧುನಿಕ ವಿಚಾರಕ್ಕೆ ತಗುಲಿಕೊಂಡು ಕೆಟ್ಟ ಪದ್ದತಿ ರೂಢಿಸಿಕೊಂಡು ಕೃಷಿ ಕಾಯಕ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚಾಮುಂಡಿ ಬೆಟ್ಟ ಪ್ರವಾಸಿ ತಾಣ ಮಾಡಬೇಡಿ ಇಲ್ಲಿ ವ್ಯಾಪಾರ ನಡೆಯುತ್ತಿದೆ. ಯಾತ್ರೆಗೂ ಜಾತ್ರೆಗು ವ್ಯತ್ಯಾಸವಿದೆ ಎಂದು ಸಹ ಅವರು ತಿಳಿಸಿದರು.